ಉದಯವಾಹಿನಿ ಸವದತ್ತಿ: ಪ್ರಾಥಮಿಕ ಆರೋಗ್ಯ ಕೇಂದ್ರ ಶಿರಸಂಗಿ ವ್ಯಾಪ್ತಿಯ ಆರೋಗ್ಯ ಮತ್ತು ಕ್ಷೇಮ ಗೋರಾಬಾಳ ಗ್ರಾಮದ ಗ್ರಾಮದೇವಿ ದ್ಯಾಮವ್ವ ದೇವಸ್ಥಾನದಲ್ಲಿ ಪರಿಣಾಮಕಾರಿ ಮಿಷನ್ ಇಂದ್ರಧನುಷ್ 5.0 ಅಭಿಯಾನ ಜರುಗಿತು.ಕಾರ್ಯಕ್ರಮದಲ್ಲಿ ಸಮುದಾಯ ಆರೋಗ್ಯ ಅಧಿಕಾರಿಗಳಾದ ಮಂಜುನಾಥ ನಾವಿ ಮಾತನಾಡಿ ಮಗುವಿನ ಸಂಪೂರ್ಣ ಬೆಳವಣಿಗೆಗೆ ಲಸಿಕೆ ಅಗತ್ಯ ಎಂದು ತಿಳಿಸಿದರು. ಸಮಾರಂಭದಲ್ಲಿ ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿಗಳಾದ ದ್ಯಾಮವ್ವ ಬಡಿಗೇರ,ಆಶಾ ಕಾರ್ಯಕರ್ತೆಯರಾದ ಶಕುಂತಲಾ ಶಿರಹಟ್ಟಿ, ಪ್ರೇಮಾ ತಳವಾರ, ಮಂಜುಳಾ ಪಾಟೀಲ, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮದ ಹಿರಿಯರು, ಸಾರ್ವಜನಿಕರು ಹಾಜರಿದ್ದರು.
