
ಉದಯವಾಹಿನಿ ಸಿಂಧನೂರು: ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಅಕ್ರಮ ಮದ್ಯ ಮಾರಾಟ ಮಿತಿ ಮೀರಿ ಹಾಡುಗಲೇ ಅನಧಿಕೃತವಾಗಿ ಮಾರಾಟ ಮಾಡುತ್ತಿದ್ದರು ಕ್ಯಾರೇ ಎನ್ನದ ಅಬಕಾರಿ ಇಲಾಖೆ ಕಣ್ಣು ಮುಚ್ಚಿ ಕುಳಿತಿರುವುದೇ ನೋಡಿದರೆ ಇಲಾಖೆ ತಿಂಗಳಿಗೆ ಸುಮಾರು ಲಕ್ಷಾಂತರ ರೂ ಮಾಮೂಲಿ ತೆಗೆದುಕೊಳ್ಳುತ್ತಾನೆ ಎಂಬು ವೇದಾಂತ ತಾಲ್ಲೂಕಿನಲ್ಲಿ ಹರಿದಾಡುತ್ತಿದೆ ಎಂದು ಸಾರ್ವಜನಿಕರು ಹೇಳಿಕೆನಗರದಲ್ಲಿ ಬರುವ ನಮಸ್ಕಾರ ಶ್ರೀ ವಿಹಾರಿ ಢಾಬಾ ಗಡಗಿ ರಾಮಣ್ಣ ರುಚಿಕ ಢಾಬಾ ಸ್ನೇಹಜೀವಿ ಗರುಡ ಜಮುನಾ ಶಂಕರ್ ಹಾಗೂ ಜಯಶ್ರೀ ಢಾಬಾ ಸೇರಿದಂತೆ ಇತರರು ಇನ್ನೂ ಅನೇಕ ಢಾಬಾಗಳು ಮತ್ತು ರೆಸ್ಟೋರೆಂಟ್ ಗಳು ಮದ್ಯದ ಬಾಟಲಿಗಳು ಹಾಡುಹಗಲೇ ರಾಜಿರೋಷವಾಗಿ ಮಾರಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ವರತು ಇದರ ಬಗ್ಗೆ ಅಬಕಾರಿ ಇಲಾಖೆ ಅಧಿಕಾರಿಗಳು ಮಾತ್ರ ಯಾವುದೇ ರೀತಿಯಲ್ಲಿ ಸ್ಪಂದನ ಮಾಡುತ್ತಿಲ್ಲ ಎಂದು ವಿವಿಧ ವಾರ್ಡುಗಳ ಜನರು ಅಭಿಪ್ರಾಯವಾಗಿದೆ ಗ್ರಾಮೀಣ ಪ್ರದೇಶದಲ್ಲಿ ಅಕ್ರಮ ಮದ್ಯ ಮಾರಾಟ ಅಂಗಡಿಗಳು ನಾಯಿಕೊಡೆಗಳಂತೆ ತಲೆ ಎತ್ತಿರುವುದನ್ನು ನೋಡಿ ಬಹಳಷ್ಟು ಜನರು.ಮದ್ಯವ್ಯಸನಿಗಳಾಗುತ್ತಿದ್ದಾರೆ. ಯುವಕರು ವಯೋವೃದ್ಧರು ಸೇರಿದಂತೆ ಇತರರು ಮದ್ಯೆದ ದಾಸರಾಗುತ್ತಿದ್ದಾರೆ.ಮೋಟಾರ್ ಬೈಕು ಟಾಟಾ ಎಸಿ ಟಂ ಟಂ ಗಾಡಿಗಳು ಮೂಲಕ ಬೆಳಗಿನಿಂದ ರಾತ್ರಿಯವರೆಗೆ ಬಾಟಲ್ಗಳನ್ನು ಸಾಗುತ್ತಿದ್ದರು ಪೊಲೀಸ್ ಇಲಾಖೆ ಅಬಕಾರಿ ಇಲಾಖೆಗೆ ಎದುರಿಗೆ ಹೊರಟಿದ್ದರು ಸಹ ಇದರ ಬಗ್ಗೆ ಕ್ರಮ ಕೈಗೊಳ್ಳುತ್ತಿಲ್ಲ ಏಕೆ ಜನರು ಪ್ರಶ್ನೆ…?ಮಾಡುತ್ತಿದ್ದಾರೆ.ದಿನಾ ಒಂದಿಲ್ಲೊಂದು ಜಗಳ ಬಡಿದಾಟ ಘಟನೆಗಳು ಮಿತಿಮೀರಿ ಕುಡಿತಿದಿಂದ ನಡೆಯುತ್ತೇವೆ.
ಮನೆಯಲ್ಲಿ ಹಣಕ್ಕಾಗಿ ಹೆಂಡತಿ ಮಕ್ಕಳನ್ನು ಪೀಡಿಸುವುದು ಸಾರ್ವಜನಿಕರನ್ನು ಪಿಡಿಸುವುದರ ಜೊತೆಗೆ ಹಣ ಕೊಡದೇ ಇದ್ದರೆ ಜಗಳ ತೆಗೆದು ಹೊಡಿ-ಬೇಡಿ ಮಾಡುತ್ತಿದ್ದು ಇದರಿಂದ ಗ್ರಾಮೀಣ ಪ್ರದೇಶದಲ್ಲಿ ಅಶಾಂತಿ ವಾತಾವರಣ ಉಂಟಾಗಿದ್ದು ಕಾನೂನು ವ್ಯವಸ್ಥೆಗೆ ಧಕ್ಕೆ ತರುವಂತಾದಾಗಿದೆ. ಸಿಂಧನೂರು ನಗರದ ಬಾರಗಳ ಮುಂದೆಯೇ ಕೆಲವರು ಅತಿಯಾಗಿ ಮಧ್ಯ ಸೇವಿಸಿ ಸಾರ್ವಜನಿಕರ ಬಸ್ ನಿಲ್ದಾಣದ ತಹಶೀಲ್ದಾರ್ ಕಚೇರಿ ಮುಂಭಾಗ ಮತ್ತು ಇತರ ಸರ್ಕಲ್ ಗಳಲ್ಲಿ ಮೈ ಮೇಲೆ ಬಟ್ಟೆಗಳು ಅರಿವಿಲ್ಲದೆ ಅರೆ ಬೆತ್ತಲೆಯಾಗಿ ಬಿದ್ದು ಮಹಿಳೆಯರು ಮಕ್ಕಳ ಸಾರ್ವಜನಿಕರಿಗೆ ಓಡಾಡಲಿಕ್ಕೆ ಮುಜರಂಗದ ಮುಜುಗರ ಉಂಟಾಗುವಂತೆ ಘಟನೆಗಳು ದಿನದಿಂದ ದಿನಕ್ಕೆ ಹಚ್ಚುತ್ತೇವೆ ಬಸ್ ನಿಲ್ದಾಣ ಹಾಗೂ ನಿಲ್ದಾಣದ ಬಳಿ ಇಂಥ ಘಟನೆಗಳು ನಡೆಯುವುದರಿಂದ ದಿನವೂ ಗ್ರಾಮೀಣ ಪ್ರದೇಶದಿಂದ ಸಾವಿರಾರು ಸಂಖ್ಯೆಯಲ್ಲಿ ನಗರಕ್ಕೆ ಬರುವ ವಿದ್ಯಾರ್ಥಿನಿಯರಿಗೆ ಮುಜುಗರ ಅನುಭವಿಸುತ್ತಿದ್ದಾರೆ ಇದನ್ನು ನೋಡಿದರೂ ನೋಡಿದಂತೆ ವರ್ತಿಸುತ್ತಿರುವ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ ಇದರ ಬಗ್ಗೆ ಸಂಬಂಧಪಟ್ಟ ಅಬಕಾರಿ ಇಲಾಖೆ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ಎಷ್ಟರ ಮಟ್ಟಿಗೆ ಸರಿ ಸರಿಪಡಿಸುತ್ತಾರೋ ಇಲ್ಲವೋ ಕಾದು ನೋಡಬೇಕಾಗಿದೆ
