ಉದಯವಾಹಿನಿ ಬೆಂಗಳೂರು : ಮುಳಬಾಗಿಲು ಶ್ರೀಪಾದರಾಜ ಮಠಾಧೀಶರಾದ ಶ್ರೀ 1008ಶ್ರೀ ಸುಜಯನಿಧಿ ತೀರ್ಥರ ತೃತೀಯ ಚಾತುರ್ಮಾಸದ ಅಂಗವಾಗಿ ಅಧಿಕ ಶ್ರಾವಣ ಮಾಸದ ಪ್ರಯುಕ್ತ ಶ್ರೀದೇವಿ ಪ್ರಸನ್ನ ರವರಿಂದ ದಾಸವಾಣಿ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು, ಇವರಿಗೆ ಮೃದಂಗದಲ್ಲಿ ವಿದ್ವಾನ್ ಮಹಾಂತ ರವರು ಸಹಕರಿಸಿದರು. ಶ್ರೀಸುಜಯನಿಧಿ ತೀರ್ಥರು ಫಲ ಮಂತ್ರಾಕ್ಷತೆ ನೀಡಿ ಆಶೀರ್ವಾದಿಸಿದರು.
