
ಉದಯವಾಹಿನಿ,ಚಿಂಚೋಳಿ: ತಾಲ್ಲೂಕಿನ ಜೀಲವರ್ಷ ಗ್ರಾಮದ ಅಮೃತ ಸರೋವರ ಸ್ಥಳಕ್ಕೆ ತಾಲ್ಲೂಕಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಶಂಕರ ರಾಠೋಡ್ ಭೇಡಿನೀಡಿ ಪರಿಶೀಲಿಸಿದರು. 15 ಅಗಷ್ಟ್ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಅಂಗವಾಗಿ ನನ್ನ ಮಣ್ಣು ನನ್ನ ದೇಶ ಅಭಿಯಾನ ಆಚರಿಸುವ ನಿಮಿತ್ತ ವಸುಧಾ ವಂಧನ್ ಕಾರ್ಯಕ್ರಮದ ಅಂಗವಾಗಿ ಭೂಮಿಯನ್ನು ಹಸಿರುಕರಣಗೊಳಿಸಲು ಅಮೃತ ಸರೋವರ ಸ್ಥಳಗಳಲ್ಲಿ ಜೀವ ವೈವಿಧ್ಯ ಹಾಗೂ ವಿವಿಧ ಔಷಧಿಯ ಗುಣವುಳ್ಳ 75ಬಗೆವುಳ್ಳ ಸಸಿಗಳನ್ನು ನೆಟ್ಟು ಬೆಳೆಸಬೇಕು ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
