
ಉದಯವಾಹಿನಿ ಕೊಲ್ಹಾರ: ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣಕ್ಕೆ ಅತ್ಯಂತ ಮಹತ್ವದ ಸ್ಥಾನವಿದೆ ಎಂದು ಸಚಿವ ಶಿವಾನಂದ ಪಾಟೀಲ್ ಹೇಳಿದರು. ಪಟ್ಟಣದ ಶನಿವಾರ ಆಜಾದ್ ನಗರದ ವಾರ್ಡ ನಂ ೧೫ ರಲ್ಲಿ ಉರ್ದು ಪ್ರಾಥಮಿಕ ಶಾಲೆಯ ನೂತನ ಕೊಠಡಿಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು, ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ರಾಜ್ಯ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತದೆ ಮಕ್ಕಳಿಗೆ ಸಮವಸ್ತ್ರ, ಪಠ್ಯಪುಸ್ತಕ ಜೊತೆಗೆ ಊಟವನ್ನು ಕೂಡ ಕರ್ನಾಟಕ ರಾಜ್ಯ ನೀಡುವ ಮೂಲಕ ಶೈಕ್ಷಣಿಕ ಕ್ರಾಂತಿಗೆ ನಾಂದಿ ಹಾಡಿದೆ ಎಂದರು.
ಶಿಕ್ಷಕರು ತಮ್ಮ ಕರ್ತವ್ಯವನ್ನು ಸಮರ್ಥವಾಗಿ ನಿಭಾಯಿಸಬೇಕು ತಮ್ಮ ಜವಾಬ್ದಾರಿ ಮರೆಯಬಾರದು ಕೆಲ ಶಿಕ್ಷಕರು ರಾಜಕೀಯ ಮಾಡುತ್ತಿದ್ದು ಅದನ್ನು ಬಿಡಬೇಕು ಎಂದು ಮಾರ್ಮಿಕವಾಗಿ ಹೇಳಿದರು. ಈ ಸಂದರ್ಭದಲ್ಲಿ ಡಾ. ಬಕ್ತಿಯಾರ್ ಖಾನ್ ಪಠಾಣ, ಕೃಮೇಯೋ ಕಾರ್ಯನಿರ್ವಾಹಕ ಅಭಿಯಂತರ ಎಸ್.ಎಸ್ ಹಿರೇಮಠ, ಪಂ ಪಂ ಮುಖ್ಯಾಧಿಕಾರಿ ವಿರೇಶ ಹಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ವಸಂತ ರಾಠೋಡ, ಐ ಸಿ ಬೊಮ್ಮನಹಳ್ಳಿ ಮುಖಂಡರಾದ ಆರ್.ಬಿ ಪಕಾಲಿ, ಭಾಷಾಸಾಬ ಶಿರೂರ, ನಬಿಸಾಬ ಹೊನ್ಯಾಳ, ದಾದಾ ಗೂಗಿಹಾಳ, ಪ.ಪಂ ಸದಸ್ಯರಾದ ಸಿ.ಎಸ್ ಗಿಡ್ಡಪ್ಪಗೋಳ, ತೌಸೀಫ್ ಗಿರಗಾಂವಿ, ದಸ್ತಗೀರ ಕಲಾದಗಿ, ಮೈನು ಜಾಲಗಾರ, ಫೈರೋಜ ಬಳಗಾರ, ರಫೀಕ್ ಹವಾಲ್ದಾರ್, ಹಸನಸಾಬ ಮುಲ್ಲಾ, ಅಯ್ಯೂಬ ದಿಂದಾರ, ಮತ್ತಿತರು ಇದ್ದರು.
