ಉದಯವಾಹಿನಿ, ಬೆಂಗಳೂರು: ಚಿಕ್ಕ ಪರದೆಯಲ್ಲಿ ಹಲವು ಧಾರಾವಾಹಿಗಳಲ್ಲಿ ರಂಜಿಸಿರುವ ನಟಿ ಶಾಂಭವಿ ವೆಂಕಟೇಶ್ ಅವರು ಕೊನೆಯ ಬಾರಿಗೆ ಪಾರು ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದರು. ನಟಿ ಶಾಂಭವಿ ಗರ್ಭಿಣಿ ಎಂಬ ಕಾರಣಕ್ಕೆ ನಟನೆಗೆ ಗುಡ್ ಬೈ ಹೇಳಿದ್ದರು. ಜೂನ್ ೨೦೨೧ ರಲ್ಲಿ ಮುದ್ದಾದ ಅವಳಿ ಮಕ್ಕಳಿಗೆ ಜನ್ಮ ನೀಡಿದ ಶಾಂಭವಿ ಮತ್ತೆ ಟಿವಿ ಪರದೆಯ ಮೇಲೆ ಕಾಣಿಸಿಕೊಂಡಿದ್ದಾರೆ.
ತಾಯ್ತನದ ಜವಾಬ್ದಾರಿ ಹೊತ್ತು ತಮ್ಮ ಅವಳಿ ಮಕ್ಕಳನ್ನು ಬೆಳೆಸಲು ನಟನೆಯಿಂದ ವಿರಾಮ ತೆಗೆದುಕೊಂಡ ಶಾಂಭವಿ ವೆಂಕಟೇಶ್ ಮತ್ತೊಮ್ಮೆ ಪ್ರೇಕ್ಷಕರರಿಗೆ ಸಿಹಿ ಸುದ್ದಿ ನೀಡಿದ್ದಾರೆ. ಎರಡು ವರ್ಷಗಳ ಅಂತರದ ನಂತರ ಶಾಂಭವಿ ಮತ್ತೆ ನಟನೆಗೆ ಮರಳಿದ್ದಾರೆ. ಹೊಚ್ಚ ಹೊಸ ಧಾರಾವಾಹಿ ’ಅಮೃತಧಾರೆ’ಯಲ್ಲಿ ನಾಯಕ ಗೌತಮ್ ದಿವಾನ್ ಮಾಜಿ ಗೆಳತಿ ಮಾನ್ಯಾ ಪಾತ್ರದಲ್ಲಿ ಮತ್ತೆ ಬಣ್ಣ ಹಚ್ಚಿದ್ದಾರೆ.
ನಟನೆಯ ಹೊರತಾಗಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ?ಯಕ್ಟಿವ್ ಆಗಿರುವ ಶಾಂಬವಿ ಶೂಟಿಂಗ್ ಆರಂಭವಾದ ಮೊದಲ ದಿನದ ಫೋಟೋವನ್ನು ಶೇರ್ ಮಾಡಿದ್ದು, ಐ ಆಮ್ ಬ್ಯಾಕ್,ನಿಮ್ಮೆಲ್ಲರ ಆಶೀರ್ವಾದ ಇರಲಿ ಎಂದು ನಟಿ ಎಂದು ನಟಿ ತಿಳಿಸಿದ್ದಾರೆ.
