ಉದಯವಾಹಿನಿ, ಹರಿಯಾಣ: ನೀವು ಬೆರಳು ತೋರಿಸಿದರೆ, ನಿಮ್ಮ ಕೈಗಳನ್ನು ಕತ್ತರಿಸುತ್ತೇ
ವೆ; ಹರಿಯಾಣದಲ್ಲಿ ಮುಂದುವರೆದ ದ್ವೇಷ ಭಾಷಣ
ಹರಿಯಾಣ ರಾಜ್ಯದಲ್ಲಿ ಹಿಂದುತ್ವ ಸಂಘಟನೆಯೊಂದರ ಬೃಹತ್ ಸಮಾವೇಶಕ್ಕೆ ಅನುಮತಿ ನೀಡುವಾಗ “ದ್ವೇಷದ ಭಾಷಣ ಮಾಡಬಾರದು” ಎಂಬ ಷರತ್ತು ವಿಧಿಸಿದ ಹೊರತಾಗಿಯೂ ಪಲ್ವಾಲ್ ಜಿಲ್ಲೆಯಲ್ಲಿ ಭದ್ರತೆಗೆ ನಿಯೋಜಿಸಿದ್ದ ಪೊಲೀಸರಿಗೆ ಕೆಲವು ಭಾಷಣಕಾರರು ಬಹಿರಂಗ ಬೆದರಿಕೆ ಹಾಕಿದ್ದಾರೆ.
ದ್ವೇಷದ ಭಾಷಣ ಮಾಡದಂತೆ ಭಾಷಣಕಾರರಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಸಂಘಟಕರು ಹೇಳುತ್ತಿದ್ದಾರೆ, ಆದರೆ ಕೆಲವು ಭಾಷಣಕಾರರು ಅದನ್ನು ನಿರ್ಲಕ್ಷಿಸಿದ್ದಾರೆ. ಒಬ್ಬ ಭಾಷಣಕಾರ, “ನೀವು ಬೆರಳು ತೋರಿಸಿದರೆ, ನಿಮ್ಮ ಕೈಗಳನ್ನು ಕತ್ತರಿಸುತ್ತೇವೆ” ಎಂದು ಹೇಳುವುದು ಕೇಳಿಸಿದೆ. ಆದರೆ ಇನ್ನೊಬ್ಬ ಭಾಷಣಕಾರ ರೈಫಲ್‌ಗಳಿಗೆ ಪರವಾನಗಿ ನೀಡುವಂತೆ ಒತ್ತಾಯಿಸಿದ್ದಾನೆ. ಎರಡು ವಾರಗಳ ಹಿಂದೆ ಹರಿಯಾಣ ರಾಜ್ಯದ ನೂಹ್‌ನಲ್ಲಿ ನಡೆದ ಕೋಮು ಹಿಂಸಾಚಾರದಲ್ಲಿ ಆರು ಜನರು ಸಾವನ್ನಪ್ಪಿದ ನಂತರ ಸಂಘಟನೆಯೊಂದು ಸಭೆ ನಡೆಸುತ್ತಿದೆ.
ಕಳೆದ ತಿಂಗಳು ನೂಹ್‌ನಲ್ಲಿ ದಾಳಿಗೊಳಗಾದ ವಿಶ್ವ ಹಿಂದೂ ಪರಿಷತ್‌ನ ಧಾರ್ಮಿಕ ಮೆರವಣಿಗೆಯನ್ನು ಪೂರ್ಣಗೊಳಿಸುವ ಕುರಿತು ಚರ್ಚಿಸಲು ಇಂದು(ಆಗಸ್ಟ್ 13) ಹಿಂದುತ್ವ ಸಂಘಟನೆಯೊಂದು ಮಹಾಪಂಚಾಯತ್ ಅನ್ನು ನೂಹ್‌ನಲ್ಲಿ ನಡೆಸಲು ಯೋಜಿಸಿತ್ತು. ಆದರೆ, ಪೊಲೀಸರಿಂದ ಅನುಮತಿ ನಿರಾಕರಿಸಿದ ನಂತರ ಅದನ್ನು 35 ಕಿಮೀ ದೂರದ ಪಲ್ವಾಲ್‌ಗೆ ಸ್ಥಳಾಂತರಿಸಲಾಯಿತು.
