ಉದಯವಾಹಿನಿ ಹೊಸಕೋಟೆ :  ತಾಲೂಕಿನ ಬೈಲನರಸಾಪುರ ಗ್ರಾಮ ಪಂಚಾಯಿತಿಗೆ ನಡೆದ ಚುನಾವಣೆಯಲ್ಲಿಆಧ್ಯಕ್ಷರಾಗಿ ಹಸೀನಾ ಖಾನಂ, ಉಪಾಧ್ಯಕ್ಷೆಯಾಗಿ ಮಾಲಾಶ್ರೀ ಶ್ರೀಕಾಂತ್ ಅಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಕೆ. ಕುಮಾರ್ ತಿಳಿಸಿದರು.
೨ನೇ ಅವಧಿಯ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಜಾತಿ ಮೀಸಲು ಸ್ಥಾನ ನಿಗದಿಯಾಗಿತ್ತು. ಎಲ್ಲರ ಒಮ್ಮತದಿಂದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಬ್ಬರು ನಾಮಪತ್ರ  ಸಲ್ಲಿಸಿದ್ದರಿಂದ ಅಂತಿಮವಾಗಿ ಅವಿರೋಧವಾಗಿ ಅಯ್ಕೆಯಾಗಿದ್ದಾರೆ0ದು ಘೋಷಿಸಿದರು.
ರಾಜ್ಯಒಕ್ಕಲಿಗರ ಸಂಘದ ನಿರ್ದೇಶಕ ಬಿ.ವಿ. ರಾಜಶೇಖರಗೌಡ ಶುಭಕೋರಿ ಮಾತನಾಡಿ, ಗ್ರಾಮ ಪಂಚಾಯತಿ ಮುಖೇನ ಜನತೆಗೆ ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರು, ಚರಂಡಿ, ಬೀದಿ ದೀಪ ಸೇರಿದಂತೆ ಸಮರ್ಪಕವಾಗಿ ಸೇವೆ ಒದಗಿಸುವಲ್ಲಿ ಪಕ್ಷ ಬೇಧ ಮರೆತು ಪ್ರಾಮಾಣಿಕವಾಗಿ ಸೇವೆ ಮಾಡುವ ಮೂಲಕ ಋಣತೀರಿಸಬೇಕು ಎಂದರು.
ಇದೇ ಸಂದರ್ಭದಲ್ಲಿಕಾ0ಗ್ರೆಸ್‌ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್‌ಕಾಂಗ್ರೆಸ್‌ ಅಧ್ಯಕ್ಷ ಡಾ. ಸಗೀರ್‌ಅಹಮದ್, ಟಿಎಪಿಸಿಎಂಎಸ್ ನಿರ್ದೇಶಕ ರವೀಂದ್ರ, ತಾಪಂ. ಮಾಜಿ ಸದಸ್ಯ ಚಾಂದ್‌ಪಾಷ, ನೆಲವಾಗಿಲು ಎಸ್‌ಎಫ್‌ಸಿಎಸ್ ಅಧ್ಯಕ್ಷ ಎಸ್. ಮಂಜುನಾಥ್, ಶ್ರೀನಿವಾಸ್, ಎ.ಆರ್.ಕೃಷ್ಣಪ್ಪ, ಪಿಡಿಒ ಮುನಿಗಂಗಯ್ಯ, ಗ್ರಾಪಂ ಸದಸ್ಯರಾದ ಫರಹಾನ ವಹೀದ್‌ಖಾನ್, ಫರಿದಾ ಸುಲ್ತಾನ, ಶಮೀತಾಜ್ ಸೈಯದ್ ಮೈದಿನ್, ಶಹದಾಬ ಅಹ್ಮದ್, ಸರಿತಾ ಬೈರೇಗೌಡ, ಮುಜಾಮೀಲ್‌ಖಾನ್, ಅಫಾಖ್‌ಖಾನ್, ಮಹಮದ್ ಷರೀಫ್, ತಬ್ರೇಜ್ ಬೇಗ್, ಹಸಿನಾ ಖಾನಂ ಅಮಾನುಲ್ಲಾಖಾನ್, ಎನ್. ಚಂದ್ರಪ್ಪ, ಕೆಂಪಮ್ಮರಾಮಕೃಷ್ಣಪ್ಪ, ರಶ್ಮಿ ಮಂಜುನಾಥ್, ನಾರಾಯಣಮ್ಮ ಚಿನ್ನಪ್ಪಯ್ಯ, ವಿ. ಶ್ರೀನಿವಾಸ್, ಗುರು ಮುಖಂಡರಾದರ ಫಿಉಲ್ಲಾಖಾನ್, ತಬ್ರೇಜ್, ಮುನೀರ್‌ಖಾನ್‌ ಹಾಗೂ ಗ್ರಾಮಸ್ಥರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!