ಉದಯವಾಹಿನಿ  ಕೆಂಭಾವಿ : ಸೂಫಿ -ಸಂತರು, ಭಾಗದ ಹಳ್ಳಿಗಳಲ್ಲಿ ಭಾವೈಕ್ಯತೆಯ ಸಂದೇಶ ಪಸರಿಸಿ ಕೀರ್ತಿವಂತರಾಗಿದ್ದಾರೆ. ಅದೇ ತರಹ ಮುದನೂರ್ ದೇವರ ದಾಸಿಮ್ಯ ಜನ್ಮ್ ಸ್ಥಳದಲ್ಲಿ ಹಜರತ್ ಮಲಂಗಷಾ ವಲಿ ಅವರ ಜಾತ್ರೆಯು ಹಿಂದೂ ಸಮಾಜದ ನೇತೃತ್ವದಲ್ಲಿಯೇ ನಡೆಯುತ್ತದೆ. ಮುದನೂರ್ ಗ್ರಾಮದ ಎಲ್ಲಾ ಸರ್ವ ಸಮುದಾಯದ ಜನರು ಯಾವುದೇ ಅಡಚಣೆ ಇಲ್ಲದೇ ಅಣ್ಣ- ತಮ್ಮಂದಿರಂತೆ ಉರೂಸ್‌ ದಿನದಂದು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಭಾವೈಕ್ಯತೆಯ ಭಾವ ತೋರಿದರು. ಪ್ರತಿ ವರ್ಷ ಹಜರತ್‌ ಮಲಂಗಷಾ ವಲಿ ಅವರ ಹೆಸರಿನಲ್ಲಿ ಉರೂಸ್‌ ಜರುಗುತ್ತದೆ. ಆದರೆ, ಯಾವುದೇ ಜಾತಿ ಮತ್ತು ಧರ್ಮಕ್ಕೆ ಸೀಮಿತವಾಗದೇ ಎಲ್ಲ ಧರ್ಮೀಯರು ಒಟ್ಟುಗೂಡಿ ಹತ್ತಾರು ದಶಕಗಳಿಂದ ಉರೂಸ್‌ ಆಚರಿಸುತ್ತಿದ್ದಾರೆ. ಗ್ರಾಮೀಣ ಪ್ರದೇಶದ ಜನ, ಯಾವ ಜಾತಿ ಭೇದಗಳಿಲ್ಲದೇ ಸಂಬಂಧಿಗಳಂತೆ ಜೀವನ ನಡೆಸುತ್ತಾರೆ. ಇದಕ್ಕೆ ಉತ್ತಮ ಉದಾಹರಣೆ  ಮುದನೂರ್ ಹಜರತ್ ಮಲಂಗಷಾ ವಲಿ ದರ್ಗಾ.
ಈ ಸಂದರ್ಭದಲ್ಲಿ ಧರ್ಮ ಗುರುಗಳಾದ ಸೈಯದ್ ಸರ್ತಾಜ್ ಪಾಶ ಖಾದ್ರಿ(ನಿಲೂರ್ ಷರೀಫ್ ) ಭೀಮರೆಡ್ಡಿ ಬೇಕಿನಾಳ್, ಹೋನಪ್ಪಗೌಡ ಮೇಟಿ, ಡೇವಿಡ್ ಸಾಹುಕಾರ್, ರಾಜಮಹಮ್ಮದ ಮಕಾನದಾರ, ಶರಣುಗೌಡ ಪಾಟೀಲ್, ಬುಡ್ಡೆಸಾಬ್ ಬೈಚಬಾಳ್, ಸೈಯದಸಾಬ್ ತಾಳಿಕೋಟಿ, ಗೌಸ್ ಪಟೇಲ್, ಬಾಬು ಮಕಾನದಾರ, ಖಾಜಿಸಾಬ್ ಕೆಂಭಾವಿ, ಅಬ್ದುಲ್ ಖಾದರ್ ನಾಶಿ, ಶಾಹುಸೇನ್ ಗೌಂಡಿ ಹಾಗೂ ಭಕ್ತಾದಿಗಳು ಇದ್ದರು.

Leave a Reply

Your email address will not be published. Required fields are marked *

error: Content is protected !!