
ಉದಯವಾಹಿನಿ ಸವದತ್ತಿ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಸವದತ್ತಿ ತಾಲೂಕಿಗೆ ನೂತನವಾಗಿ ಆಗಮಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮೋಹನ್ ದಂಡಿನ ಅವರನ್ನು ತಾಲೂಕಿನ ಸಮಸ್ತ ನೌಕರರ ವತಿಯಿಂದ ಸಂಘದ ಪರವಾಗಿ ಅಧ್ಯಕ್ಷರಾದ ಆನಂದಕುಮಾರ್ ಮೂಗಬಸವ ಇವರ ನೇತೃತ್ವದಲ್ಲಿ ಸ್ವಾಗತಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸವದತ್ತಿ ತಾಲೂಕಿನ ಸರಕಾರಿ ನೌಕರರ ಸಂಘದ ಕಾಯ೯ಧ್ಯಕ್ಷರಾದ ಎ ಕೆ ಮುಲ್ಲಾ ಖಜಾಂಜಿ ಸಿಂಗಾರಗೊಪ್ಪ ಮಹಾಂತೇಶ ಮುಂಡರಗಿ ವಿಠ್ಠಲ ದೇವರಡ್ಡಿ ಸಂಗಮೇಶ ಖನ್ನಿ ನಾಯ್ಕರ ಕಾರದಗಿ ಎಂ ಕೆ ಪಾಟೀಲ್ ರಾಮಣ್ಣ ಸಂಘದ ಪದಾಧಿಕಾರಿಗಳು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
