ಉದಯವಾಹಿನಿ ತಾಳಿಕೋಟಿ: ಆರೋಗ್ಯ ಸಕಲ ಸಂಪತ್ತಿಗಿಂತಲೂ ಮಿಗಿಲಾದ ಸಂಪತ್ತಾಗಿದೆ ಇವತ್ತು ಅತಿ ಹೆಚ್ಚು ಸಾವುಗಳು ಆರೋಗ್ಯದ ನಿರ್ಲಕ್ಷೆಯಿಂದ ಸಂಭವಿಸುತ್ತಿವೆ ಆರೋಗ್ಯವನ್ನು ಕಾಪಾಡಿಕೊಳ್ಳಿ ನಿರ್ಲಕ್ಷ್ಯ ವಹಿಸಿಬೇಡಿ ಎಂದು ಕರ್ನಾಟಕ ಲೋಕಾಯುಕ್ತ ಬಿಎಸ್ ಪಾಟೀಲ್ ಹೇಳಿದರು. ಇತ್ತೀಚಿಗೆ ತಮ್ಮ ಹುಟ್ಟೂರಾದ ಕೊಡೆಕನೂರ ಗ್ರಾಮದಲ್ಲಿ ತಮ್ಮ ತಂದೆಯವರಾದ ದಿವಂಗತ ಶ್ರೀ ಸಂಗನಗೌಡ ಭೀಮನಗೌಡ ಪಾಟೀಲ್ ಇವರ ಪ್ರಥಮ ವರ್ಷದ ಪುಣ್ಯ ಸ್ಮರಣೋತ್ಸವ ಪ್ರಯುಕ್ತ ಹಮ್ಮಿಕೊಂಡ ಉಚಿತ ಕಣ್ಣಿನ ತಪಾಸಣೆ ಹಾಗೂ ಶಸ್ತ್ರ ಶಸ್ತ್ರಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಡಾಕ್ಟರ್ ಪ್ರಭುಗೌಡ ಲಿಂಗದಳ್ಳಿ ಅವರು ಸುಮಾರು 25 ವರ್ಷಗಳಿಂದ ಆರೋಗ್ಯ ಕ್ಷೇತ್ರದಲ್ಲಿ ಅದರಲ್ಲಿಯೂ ವಿಶೇಷವಾಗಿ ಕಣ್ಣಿನ ಸುರಕ್ಷತೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿಯನ್ನು ಮೂಡಿಸುತ್ತಿದ್ದಾರೆ ಈ ಕ್ಷೇತ್ರದಲ್ಲಿ ಅವರು ಮಾಡಿದ ಸೇವೆ ಅನನ್ಯವಾಗಿದೆ ಎಂದರು. ಖ್ಯಾತ ನೇತೃತ್ವಜ್ಞ ಡಾ. ಪ್ರಭುಗೌಡ ಅವರು ಮಾತನಾಡಿ ಲೋಕಾಯುಕ್ತ ಬಿಎಸ್ ಪಾಟೀಲರು ದೂರದ ಬೆಂಗಳೂರುನಲ್ಲಿ ಇದ್ದರು ತಮ್ಮ ತವರು ಜಿಲ್ಲೆ ಹಾಗೂ ವಿಶೇಷವಾಗಿ ತಮ್ಮ ಹುಟ್ಟೂರಿನ ಕುರಿತು ಅಪಾರ ಕಾಳಜಿಯನ್ನು ಹೊಂದಿದವರಾಗಿದ್ದಾರೆ ಅವರು ಸದಾ ನನಗೆ ಗ್ರಾಮೀಣ ಪ್ರದೇಶದಲ್ಲಿ ಸೇವೆಯನ್ನು ಮಾಡಲು ಪ್ರೋತ್ಸಾಹಿಸುತ್ತಾರೆ ಇಂದಿನ ಈ ಶಿಬಿರದಲ್ಲಿ ಭಾಗವಹಿಸಿದ ಭಾಗವಹಿಸಿದವರಲ್ಲಿ ಯಾರಿಗೆ ಶಸ್ತ್ರಚಿಕಿತ್ಸೆಯ ಅಗತ್ಯವಿದೆಯೋ ಅವರನ್ನು ವಿಜಯಪುರ ಅನುಗ್ರಹ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಉಚಿತವಾಗಿ ಶಸ್ತ್ರಚಿಕಿತ್ಸೆಯನ್ನು ಮಾಡಲಾಗುವುದು ಕಣ್ಣಿನ ಸುರಕ್ಷತೆ ಕುರಿತು ಹೆಚ್ಚು ಜಾಗೃತರಾಗಿರಿ ಎಂದರು. ಈ ತಪಾಸಣಾ ಶಿಬಿರದಲ್ಲಿ ಸುಮಾರು 350 ಜನರು ತಪಾಸಣೆಗೆ ಒಳಪಟ್ಟರು ಇದರಲ್ಲಿ 115 ಜನರನ್ನು ಶಾಸ್ತ್ರ ಚಿಕಿತ್ಸೆಗೆ ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಖ್ಯಾತ ನ್ಯಾಯವಾದಿ ಶೋಭಾ ಪಾಟೀಲ್ ಹೈ ಕೋರ್ಟ್ ನ್ಯಾಯವಾದಿ ಸೂರಜ್ ಪಾಟೀಲ್ ಜಿಲ್ಲಾ ಆಯುಷ್ಯ ವೈದ್ಯಾಧಿಕಾರಿ ಡಾಕ್ಟರ್ ಆರ್ ಎಸ್ ಪಾಟೀಲ್ ಪಡೆಕನೂರು ಆಯುಷ್ಯ ಅಧಿಕಾರಿ ಡಾ ಮನಗೂಳಿ ಡಾಕ್ಟರ್ ದೇಸಾಯಿ ತಾಲೂಕ ವೈದ್ಯಾಧಿಕಾರಿ ಡಾಕ್ಟರ್ ಸತೀಶ್ ತಿವಾರಿ ನೇತ್ರಾಧಿಕಾರಿಗಳಾದ ಮಹಾಂತೇಶ್ ಪೂಜಾರತಿ ಜೂನಿಯರ್ ನದಾಫ್ ಅಪ್ತಾಬ್ ಹಾಗೂ ಅನುಗ್ರಹ ಆಸ್ಪತ್ರೆಯ ಸಿಬ್ಬಂದಿಗಳು ಇದ್ದರು.

Leave a Reply

Your email address will not be published. Required fields are marked *

error: Content is protected !!