
ಉದಯವಾಹಿನಿ, ಔರಾದ್ : ವಿಶ್ವದಲ್ಲಿ ಭಾರತ ತನ್ನದೆಯಾದ ಭಾಷೆ,ಸಂಸ್ಕೃತಿ,ಧರ್ಮ,ಜನಾಂಗ, ಪ್ರಾ ಕೃತಿಕತೆ ಇತ್ಯಾದಿ ವಿಶಿಷ್ಟತೆಯ ವೈವಿಧ್ಯತೆಯಲ್ಲಿ ಏಕತೆಯನ್ನು ಕಾಪಾಡಿಕೊಂಡಿದ್ದು ನಮ್ಮ ದೇಶದ ಮಣ್ಣಿನ ಮಹಿಮೆ ಆಗಿದೆ ಎಂದು ಔರಾದ ತಾಲೂಕಾ ಜನಪದ ಸಾಹಿತ್ಯ ಪರಿಷತ್ತಿ ಅಧ್ಯಕ್ಷರಾದ ಡಾ.ಸಂಜುಕುಮಾರ ಜುಮ್ಮಾ ಹೇಳಿದರು.ತಾಲ್ಲೂಕಿನ ಸಂತಪುರ್ ಸಿದ್ದರಾಮೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ, ದಕ್ಷಿಣ ವಲಯ ಸಂಸ್ಕೃತಿಕ ಕೇಂದ್ರ ನಾಗಪುರ, ಕರ್ನಾಟಕ ಜಾನಪದ ಪರಿಷತ್ತು ಘಟಕ ಔರಾದ ಹಾಗೂ ಸಿದ್ದರಾಮೇಶ್ವರ ಪದವಿ ಪೂರ್ವ ಕಾಲೇಜ ಸಂತಪುರ್ ಸಂಯುಕ್ತಾಶ್ರಯದಲ್ಲಿ ನಮ್ಮ ಮಣ್ಣು,ನಮ್ಮ ದೇಶ ಯುವ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ನಮ್ಮ ದೇಶ ಅದ್ಭುತ ಶಕ್ತಿ ದೇಶ ಇರುವುದರಿಂದ ನಾವೆಲ್ಲರೂ ಸುಸಂಸ್ಕೃತರಾಗಿ ಹಾಗೂ ಮಾನವಿಯತೆ ಜೀವನ ನಡೆಸಬೇಕು ಎಂದರು.ಸಂಪನ್ಮೂಲ ವ್ಯಕ್ತಿಗಳಾದ ಶಿವಶರಣಪ್ಪ ವಲ್ಲೆಪುರೆ ಮಾತನಾಡಿ ಅಸಹಾಯಕರಿಗೆ ಸಹಾಯ ಮಾಡುವುದು ನಮ್ಮ ದೇಶದ ಸಂಸ್ಕೃತಿಯಾಗಿದೆ ಎಂಬುವುದು ಇಂದಿನ ಯುವಕರು ಅರಿಯುವುದು ಅವಶ್ಯಕವಾಗಿದೆ ಎಂದರು.ಪ್ರಾಂಶುಪಾಲ ನವೀಲಕುಮಾರ ಉತ್ಕಾರ್, ಉಪನ್ಯಾಸಕರಾದ ಕಲ್ಲಪ್ಪ ಬಟ್ಟೆ, ಈರಮ್ಮ ಕಟಗಿ, ಶಿವಪುತ್ರ ಧರಣಿ, ಸುಧಾ ಕೌಟಿಗೆ, ಮೀರಾತಾಯಿ ಕಾಂಬಳೆ,ವನದೇವಿ ಎಕ್ಕಳೆ, ಅಂಬಿಕಾ ವಿಶ್ವಕರ್ಮ, ಸಿದ್ದಾರೂಢ ಪಾಂಚಾಳ ಇದ್ದರು.
