ಉದಯವಾಹಿನಿ ಸಿರುಗುಪ್ಪ : ನಗರದ ಶ್ರೀ ಅಭಯಾಂಜನೇಯ್ಯ ಸ್ವಾಮಿ ದೇವಸ್ಥಾನದ ಸಭಾಂಗಣದಲ್ಲಿ ತಾಲೂಕು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ನೌಕರರ ಸಮನ್ವಯ ಸಮಿತಿಯಿಂದ ಪಾರಂಪಾರಿಕವಾಗಿ ಹಮ್ಮಿಕೊಳ್ಳುವ ನೂತನ ಶಾಸಕರಿಗೆ ಅಭಿನಂದನೆ ಕಾರ್ಯಕ್ರಮದಲ್ಲಿ ಸಮಿತಿಯ ಅಧ್ಯಕ್ಷ ಎನ್.ಬಿ.ವೆಂಕಟೇಶ್ ಹಾಗೂ ನೌಕರರಿಂದ ಶಾಸಕ ಬಿ.ಎಂ.ನಾಗರಾಜ ಅವರಿಗೆ ಮನವಿ ಸಲ್ಲಿಸಲಾಯಿತು.ನಗರದಲ್ಲಿ ಹಲವಾರು ವರ್ಷಗಳಿಂದ ಶಿಥಿಲಗೊಂಡಿರುವ ಸಮಿತಿಯ ಕಟ್ಟಡವು ರಸ್ತೆ ಅಗಲೀಕರಣದ ವೇಳೆ ಸಂಪೂರ್ಣವಾಗಿ ಹಾನಿಯಾಗಿದ್ದು ಸಂಬAದಿಸಿದ ಇಲಾಖೆಯಿಂದ 100×100 ವಿಸ್ತೀರ್ಣದಲ್ಲಿ ಖಾಲಿ ನಿವೇಶನ ಮಂಜೂರು ಮಾಡಿಸಿ ಕನಿಷ್ಠ ೧ಕೋಟಿ ವೆಚ್ಚದಲ್ಲಿ ಸಕಲ ಸೌಲಭ್ಯಗಳುಳ್ಳ ಎಸ್.ಸಿ, ಎಸ್.ಟಿ ಸರ್ಕಾರಿ ನೌಕರರ ಭವನದ ನಿರ್ಮಾಣಕ್ಕೆ ಕಾರಣೀಭೂತರಾಗಬೇಕು.
ವಿವಿಧ ಹುದ್ದೆಗಳಲ್ಲಿ ಖಾಲಿಯಿರುವ ಎಲ್ಲಾ ಬ್ಯಾಕ್ ಲಾಗ್ ಹುದ್ದೆಗಳನ್ನು ತುಂಬುವ0ತೆ ಅಧಿವೇಶನದಲ್ಲಿ ಒತ್ತಾಯಿಸಿ ಎಸ್.ಸಿ, ಎಸ್.ಟಿ ನಿರುದ್ಯೋಗಿಗಳ ಬಾಳಿಗೆ ಬೆಳಕಾಗಬೇಕು.
ಕಲ್ಯಾಣ ಕರ್ನಾಟಕ ಅಥವಾ ಜಿಲ್ಲಾ ಖನಿಜ ನಿಧಿಯ ಅನುದಾನದಡಿ ತಾಲೂಕಿನೆಲ್ಲೆಡೆ ಬಡ ವಿದ್ಯಾರ್ಥಿಗಳಿಗೆ ಉಚಿತ ಸ್ಪರ್ದಾತ್ಮಕ ತರಬೇತಿ ಕೇಂದ್ರ ಹಾಗೂ ಡಿಜಿಟಲ್ ಗ್ರಂಥಾಲಯ ಸ್ಥಾಪಿಸಿ ಐ.ಎ.ಎಸ್, ಐ.ಪಿ.ಎಸ್, ಕೆ.ಎ.ಎಸ್, ಕೆ.ಪಿ.ಎಸ್‌ನಂತಹ ಉನ್ನತ ಹುದ್ದೆಗಳನ್ನು ಪಡೆಯಲು ಹಂಬಲಿಸುವ ವಿದ್ಯಾರ್ಥಿಗಳಿಗೆ ಆಶಾಕಿರಣವಾಗಬೇಕು.ದುರ್ಬಲ ವರ್ಗಗಳ ವಿದ್ಯಾರ್ಥಿಗಳ ಸಾಮಾಜಿಕ, ಶೈಕ್ಷಣಿಕ, ಸಬಲೀಕರಣದುದ್ದೇಶದಿಂದ ಶಿಷ್ಯವೇತನ, ಶುಲ್ಕ ವಿನಾಯಿತಿ, ಪ್ರತಿಭಾ ಪುರಸ್ಕಾರದೊಂದಿಗೆ ಉತ್ತೇಜಿಸುವಂತೆ ಸಂಬAದಿಸಿದ ಇಲಾಖೆಗಳಿಗೆ ಆದೇಶಿಸಬೇಕು. ಎನ್.ಪಿ.ಎಸ್ ರದ್ದುಗೊಳಿಸಿ ಓ.ಪಿ.ಎಸ್. ಜಾರಿಗೊಳಿಸಬೇಕು. ಇಲಾಖೆಗಳಲ್ಲಿ ನೌಕರರ ಮೇಲಾಗುವ ಅನಗತ್ಯ ಕಿರುಕುಳವನ್ನು ತಡೆಯುವಂತಾಗಬೇಕೆ0ದು ಆಗ್ರಹಿಸಲಾಯಿತು. ಇದೇ ವೇಳೆ ತಾಲೂಕು ಆರೋಗ್ಯಾಧಿಕಾರಿ ಡಾ.ಈರಣ್ಣ, ಹಿರಿಯ ನೌಕರರಾದ ಶೇಖರಪ್ಪ ಮೇಗಳಮನೆ ಹನುಮಂತಪ್ಪ, ಎಂ.ಪ0ಪಾಪತಿ,ತಿರುಮಲೇಶ್, ರಾಘವೇಂದ್ರ, ಚಂದ್ರಕಾ0ತ, ವಿರುಪಾಕ್ಷಪ್ಪ ಹಾಗೂ ಇನ್ನಿತರರು ಇದ್ದರು.

Leave a Reply

Your email address will not be published. Required fields are marked *

error: Content is protected !!