
ಉದಯವಾಹಿನಿ ಜೇವರ್ಗಿ:ತಾಲೂಕಿನ ಗoವ್ಹಾರ ಗ್ರಾಮದಲ್ಲಿ ಸದ್ಗುರು ವಿಶ್ವರಾಧ್ಯರ ಅಬ್ಬೆತುಮಕೂರಿಗೆ ಭಕ್ತರ ಪಾರಂಪರಿಕ ಪಾದಯಾತ್ರೆಗೆ ಪರಮಪೂಜ್ಯ ಡಾ.ಗಂಗಾಧರ ಮಹಾಸ್ವಾಮಿಗಳು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಗ್ರಾಮದ ನಂದಿ ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ನಂತರ ಭಕ್ತರು ಶ್ರೀಗಳ ಪಾರಂಪರಿಕ ಪಾದಯಾತ್ರೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಧರ್ಮಣ್ಣ ದೊಡ್ಡಮನಿ ಮಾಜಿ ಕುರಿ ಮತ್ತು ಉಣ್ಣಿ ನಿಗಮ ಮಂಡಳಿ ಅಧ್ಯಕ್ಷರು, ಹಾಗೂ ಶಿವರಾಜ್ ಪಾಟೀಲ್ ರದ್ದೇವಡಗಿ ಬಿಜೆಪಿ ಜಿಲ್ಲಾಧ್ಯಕ್ಷರು ಪರಮಪೂಜ್ಯ ಗಂಗಾಧರ ಮಹಾಸ್ವಾಮಿಗಳೊಂದ ಆಶೀರ್ವಾದ ಪಡೆದರು.ಈ ಸಂದರ್ಭದಲ್ಲಿ ಮಲ್ಲಶೆಟ್ಟೆಪ್ಪ ಗೌಡ ಹಿರೇಗೌಡರ, ರೇವಣಸಿದ್ದಪ್ಪ ಸಂಕಲಿ, ಸಾಯ್ಬಣ್ಣ ಗುತ್ತೇದಾರ್, ಮಹಾದೇವ್ ಮಠದ ಭಕ್ತಾದಿಗಳು ಹಾಗೂ ಗ್ರಾಮಸ್ಥರು ಈ ಪಾದಯಾತ್ರೆಯಲ್ಲಿ ಉಪಸ್ಥಿತರಿದ್ದರು.
