
ಉದಯವಾಹಿನಿ,ಚಿಂಚೋಳಿ: ಕಾಂಗ್ರೆಸ್ ಕೆಲ ಜನಪ್ರತಿನಿಧಿಗಳು,ಸಚಿವರು,ಶಾಸಕರು, ಪಕ್ಷದ ಮುಖಂಡರು ಸರ್ಕಾರಿ ಅಧಿಕಾರಿಗಳಿಗೆ ಹಾಗೂ ನೌಕರರಿಗೆ ಅವಾಜ್ ಹಾಕಿ ಅವಾಚ್ಯ ಶಬ್ದಗಳಿಂದ ಮಾತನಾಡುವುದು ತಡೆಗಟ್ಟಬೇಕು ಎಂದು ಸಿಎಂಗೆ ಪತ್ರ ಮೂಲಕ ಒತ್ತಾಯಿಸಿದ್ದೇನೆ ಎಂದು ಹಿರಿಯ ಸಮಾಜ ಸೇವಕ ರಮೇಶ ಯಾಕಾಪೂರ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟನೆ ಹೊರಡಿಸಿದ ಅವರು,ಕಾಂಗ್ರೆಸ್ ಪಕ್ಷದ ಕೆಲವರು ಸರ್ಕಾರಿ ಅಧಿಕಾರಿಗಳಿಗೆ ಹಾಗೂ ನೌಕರರಿಗೆ ಅವಾಜ್ ಹಾಕಿದ್ದು ಸೋಷಿಯಲ್ ಮೇಡಿಯದಲ್ಲಿ ಹರಿದಾಡುತ್ತಿದ್ದು,ಕೆಲವರು ಕರೆ ಮಾಡಿ ನಿಮಗೆ ಭೇಟಿಯಾಗಿ ಮಾತನಾಡುವುದು ಇದ್ದು,ನೀಮ್ಮ ಮೇಲೆ ದೂರುಗಳು ಕೇಳಿಬಂದಿವೆ ಎಂದು ಅವಾಜ್ ಹಾಕುತ್ತಿದ್ದಾರೆ ಎಂದು ಅಧಿಕಾರಿಗಳು ಅಧೀನ ನೌಕರರು ಗೋಳಾಗುತ್ತಿದ್ದಾರೆ.
ಸಾರ್ವಜನಿಕರು ಹಿಂದಿನ ಬಿಜೆಪಿ ಸರ್ಕಾರ ತೆಗೆಯಬೇಕು ಎಂದು ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಶಾಸಕರು ಗೆಲ್ಲಿಸಿ ಜನರು ಅಧಿಕಾರ ನೀಡಿದ್ದಾರೆ,ಕೆಲ ಶಾಸಕರು,ಸಂಸದರು,ಸಚಿವರು ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಮನಬಂದಂತೆ ತರಾಟೆಗೆ ತೆಗೆದುಕೊಳ್ಳುತ್ತಿದ್ದು,ಯಾವುದೇ ಕಾರಣಕ್ಕೂ ಅಧಿಕಾರಿಗಳ ತಪ್ಪು ಕಂಡುಬಂದಲ್ಲಿ ಮೇಲಾಧಿಕಾರಿಗಳ ಗಮನಕ್ಕೆ ತಂದು ಸೇವಾ ನಿಯಮಗಳ ಪ್ರಕಾರ ಕ್ರಮಕೈಗೊಳ್ಳಬೇಕು ಹೊರತು ಖಾಸಗಿ ನೌಕರರಂತೆ ಅವಾಜ್ ಹಾಕುತ್ತಿರುವುದು ಒಳ್ಳೆಯ ನಡತೆ ಅಲ್ಲ ಎಂದರು.
ಇದು ಸಾರ್ವಜನಿಕರಲ್ಲಿ ಕೆಟ್ಟ ಪರಿಣಾಮ ಬೀರುವುದು ಸತ್ಯವಾದ ಮಾತು ಆದುದರಿಂದ ಸಚಿವರಿಗೆ,ಶಾಸಕರಿಗೆ,ಮುಖಂಡರಿಗೆ ಅವಾಜ್ ಹಾಕದಂತೆ ಮುಖ್ಯಮಂತ್ರಿಗಳು ಮಾರ್ಗದರ್ಶನ ನೀಡಬೇಕು ಎಂದು ಅವರು ಸಿಎಂಗೆ ಪತ್ರ ಬರೆದು ಮನವಿ ಸಲ್ಲಿಸಿದ್ದಾರೆ.
