ಉದಯವಾಹಿನಿ,ಕೆ.ಆರ್.ಪೇಟೆ: ಪೂಜೆಪುನಸ್ಕಾರಗಳನ್ನು ಕೈಗೊಳ್ಳುವ ಮೂಲಕ ಭಗವಂತನ ಹಾಗೂ ಭಕ್ತರ ನಡುವೆ ಸಂಪರ್ಕ ಕಲ್ಪಿಸುವ ಅರ್ಚಕರ ಸೇವಾ ಕಾರ್ಯ ಪುರಾತನ ಕಾಲದಿಂದಲೂ ಬೆಳೆದುಬಂದಿದೆ ಎಂದು ಶಾಸಕ ಹೆಚ್.ಟಿ.ಮಂಜು ಅಭಿಪ್ರಾಯಪಟ್ಟರು. ಅವರು ಪಟ್ಟಣದ ಕೆರೆಬೀದಿಯಲ್ಲಿರುವ ಶ್ರೀರಾಮಮಂದಿರದಲ್ಲಿ ತಾಲ್ಲೂಕು ಮುಜುರಾಯಿ ದೇವಾಲಯಗಳ ಅರ್ಚಕರು ಹಾಗೂ ಆಗಮಿಕರು ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ಅನಾದಿ ಕಾಲದಿಂದಲೂ ಭಗವಂತನ ಸಾಮೀಪ್ಯದಲ್ಲಿದ್ದು ದೇವರಿಗೆ ಭಕ್ತರ ಬೇಡಿಕೆಗಳನ್ನು ಭಗವಂತನಿಗೆ ತಲುಪಿಸಿ ಅವರ ಸೇವಾ ಕಾರ್ಯಗಳನ್ನು ಭಕ್ತಿಭಾವದಿಂದ ಸಮರ್ಪಿಸುವ ಅರ್ಚಕ ವೃತ್ತಿ ಬಹಳ ಪವಿತ್ರವಾದುದು. ಭಕ್ತಿಯ ಮೂಲಕ ತಮ್ಮನ್ನು ದೇವರ ಸೇವೆಗೆ ಸಮರ್ಪಿಸಿಕೊಂಡು ಅರ್ಪಣಾ ಮನೋಬಾವದಿಂದ ಕೆಲಸ ನಿರ್ವಹಿಸುತ್ತಿರುವ ಅರ್ಚಕರು ಇಂದು ಸಂಕಷ್ಟದ ಜೀವನ ನಡೆಸುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಸ್ವಸ್ತಿಕ್ ಹಣ ಬಿಡುಗಡೆ, ಮಂಜೂರು ಸೇರಿದಂತೆ ನಿಮ್ಮ ಕೆಲಸಗಳನ್ನು ತಹಶೀಲ್ದಾರ್ ಸಮ್ಮುಖದಲ್ಲಿ ಮಾಡಿಕೊಡುವ ಕೆಲಸವನ್ನು ಮಾಡಲಿದ್ದೇನೆ.
ನಿಮ್ಮ ಸಂಘಕ್ಕೆ ನಿವೇಶನ ಕೊಡಿಸುವ ಕೆಲಸವನ್ನು ಮುಂದಿನ ದಿನಗಳಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿ ಮಾಡಲಾಗುವುದು. ತಾಲ್ಲೂಕುನಾದ್ಯಂತ ೧೦೦-೨೦೦ ವರ್ಷಗಳ ಇತಿಹಾಸವಿರುವ ಅನೇಕ ಮುಜುರಾಯಿ ದೇವಾಲಯಗಳಿದ್ದು ಅವುಗಳನ್ನು ಹಂತಹAತವಾಗಿ ದುರಸ್ಥಿ, ಜೀರ್ಣೋದ್ದಾರ ಸೇರಿದಂತೆ ಅಭಿವೃದ್ದಿಗೊಳಿಸುವ ಕೆಲಸವನ್ನು ಮುಜುರಾಯಿ ಇಲಾಖೆಯ ಸಹಕಾರದೊಂದಿಗೆ, ಶಾಸಕರ ಅನುದಾನ ಸೇರಿದಂತೆ ಅನುದಾನಗಳ ಮೂಲಕ ಅಭಿವೃದ್ದಿಯನ್ನು ಮುಂದಿನ ದಿನಗಳಲ್ಲಿ ಮಾಡಲಿದ್ದೇನೆ. ತಾಲ್ಲೂಕಿನಲ್ಲಿ ನಿಮ್ಮೆಲ್ಲರ ಮಧ್ಯದಲ್ಲಿ ಇದ್ದು ನಿಮ್ಮ ಕಷ್ಟಸುಖಗಳಲ್ಲಿ ಭಾಗಿಯಾಗುವ ಮೂಲಕ ನಿಮ್ಮ ದನಿಯಾಗಿ ಕೆಲಸ ಮಾಡಲಿದ್ದೇನೆ. ಎಂದರು. ಇದೇವೇಳೆ ತಾಲ್ಲೂಕು ಮುಜುರಾಯಿ ದೇವಾಲಯಗಳ ಅರ್ಚಕರು ಹಾಗೂ ಆಗಮಿಕರು ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಅಭಿನಂದಿಸಲಾಯಿತು.
ಇದೇ ಸಂದರ್ಭದಲ್ಲಿ ತಹಶೀಲ್ದಾರ್ ನಿಸರ್ಗಪ್ರಿಯ, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಜಾನಕೀರಾಮು, ಟಿಎಪಿಸಿಎಂಸಿ ನಿರ್ದೇಶಕ ಬಲದೇವ್, ತಾಲ್ಲೂಕು ಮುಜುರಾಯಿ ದೇವಾಲಯಗಳ ಅರ್ಚಕರ ಸಂಘದ ಅಧ್ಯಕ್ಷ ರವಿಚಂದ್ರನ್, ಗೌರವಾದ್ಯಕ್ಷ ಸಂಪತ್ ಕುಮಾರ್, ಸಹಕಾರ್ಯದರ್ಶಿ ಯಾಚೇನಹಳ್ಳಿಮಂಜುನಾಥ್, ಖಜಾಂಚಿ ವೇದಮೂರ್ತಿ, ನಿರ್ದೇಶಕರಾದ ಕುಂದೂರು ಜಗದೀಶ್, ಶಶಿಧರ್, ಸೇರಿದಂತೆ ತಾಲ್ಲೂಕಿನ ವಿವಿಧ ದೇವಾಲಯಗಳ ಅರ್ಚಕರು ಹಾಜರಿದ್ದರು.
