ಉದಯವಾಹಿನಿ ಮಾಲೂರು:- ತಾಲೂಕಿನ ಮಡಿವಾಳ ಗ್ರಾಮ ಪಂಚಾಯಿತಿಯ ಎರಡನೇ ಅವಧಿಗೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಮಡಿವಾಳ ಗ್ರಾ.ಪಂ. ಸದಸ್ಯೆ ಪದ್ಮಾವತಿ ಸುರೇಶ್ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಯಶವಂತಪುರ ಗ್ರಾ.ಪಂ. ಸದಸ್ಯೆ ಲಾವಣ್ಯ.ವೈ.ಎಂ.ರಾಘವೇಂದ್ರ ಆಯ್ಕೆಯಾಗಿರುತ್ತಾರೆ.
ಮಡಿವಾಳ ಗ್ರಾಮ ಪಂಚಾಯಿತಿಯ ಎರಡನೇ ಅವಧಿಗೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಅನುಸೂಚಿತ ಜಾತಿ ಸಾಮಾನ್ಯ ಪದ್ಮಾವತಿ ಸುರೇಶ್, ಹಾಗೂ ಸಿ.ಎಂ.ವೆಂಕಟೇಶ್ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರಗಳನ್ನು ಸಲ್ಲಿಸಿದ್ದರು. ನಂತರ ನಡೆದ ಚುನಾವಣೆಯಲ್ಲಿ ಸಿ.ಎಂ.ವೆಂಕಟೇಶ್ 7 ಮತಗಳು ಹಾಗೂ ಪದ್ಮಾವತಿ ಸುರೇಶ್ 10 ಮತಗಳು ಪಡೆದು ಅಧ್ಯಕ್ಷರಾಗಿ ಆಯ್ಕೆಯಾದರು. ಸಾಮಾನ್ಯ ಮಹಿಳೆ ಉಪಾಧ್ಯಕ್ಷ ಸ್ಥಾನಕ್ಕೆ ಲಾವಣ್ಯ.ವೈ.ಎಂ, ಶುಭಾಷಿಣಿ ನಾಮಪತ್ರಗಳನ್ನು ಸಲ್ಲಿಸಿದ್ದರು.ಶುಭಾಷಿಣಿ 6 ಮತಗಳು ಪಡೆದರೆ, ವೈ.ಎಂ.ಲಾವಣ್ಯ 11 ಮತಗಳನ್ನು ಪಡೆದು ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವುದಾಗಿ ಚುನಾವಣಾಧಿಕಾರಿ ಚಂದ್ರಪ್ಪ ಘೋಷಿಸಿದರು. ಈ ಸಂದರ್ಭದಲ್ಲಿ 17 ಗ್ರಾ.ಪಂ. ಸದಸ್ಯರು ಹಾಜರಿದ್ದರು. ಕಾಂಗ್ರೆಸ್ ಪಕ್ಷದ ಬೆಂಬಲಿತ ಸದಸ್ಯರು ಶಾಸಕ ಕೆ.ವೈ.ನಂಜೇಗೌಡ ಅವರ ಸಲಹೆ ಮಾರ್ಗದರ್ಶನದ  ಮೇರೆಗೆ ಆಡಳಿತ ಮಂಡಳಿಯ ಸಹಕಾರ ಪಡೆದು ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಅಭಿವೃದ್ಧಿಗೆ ಸರ್ಕಾರದಿಂದ ಇತರೆ ಯೋಜನೆಗಳ ಮೂಲಕ ಅಭಿವೃದ್ಧಿ ಸ್ವಚ್ಛತೆ ಹಾಗೂ ಕುಡಿಯುವ ನೀರಿಗಾಗಿ ಎನ್‌ಆರ್‌ಇಜಿ ಗೆ ಬರುವ ಅನುದಾನಗಳನ್ನು ಸಮರ್ಪಕವಾಗಿ ಬಳಸಿಕೊಂಡು ಗ್ರಾಮಗಳಲ್ಲಿ ಸ್ವಚ್ಛತೆ ಹಾಗೂ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯರಾದ ಕುಮಾರಿ ಜಯರಾಮೇಗೌಡ, ಮಮತ ಆರ್,ಎಂ.ವೆಂಕಟೇಶ್, ಸಿ.ಎಲ್.ಧನಸಿಂಗ್, ಎಂ.ಆರ್.ನಾಗೇಂದ್ರಗೌಡ, ಪದ್ಮಶೀರಾಮ್, ಆನಂದರೆಡ್ಡಿ ಎಲ್, ಮಂಜುಳ, ಮಂಜುನಾಥ್.ಎಲ್.ಕೆ., ಅಜ್ಮಲ್ ಖಾನ್, ದಯಾನಂದ್.ಎನ್., ಸರೋಜ.ಕೆ.ಎಸ್. ನವೀನ್ ಕೆ.ಎನ್., ವೆಂಕಟಲಕ್ಷಮ್ಮ, ಪಿಡಿಒ ಎನ್ ದೀಪ, ಮುಖಂಡರಾದ ಮಾಜಿ ಅಧ್ಯಕ್ಷ ಸಿ.ಎನ್.ಮುನಿರಾಜು, ಮಾಜಿ ಸದಸ್ಯರಾದ ಮದ್ದೂರಪ್ಪ, ಎಂ.ಪಿ.ಚಂದ್ರಶೇಖರ್, ರಮೇಶ್‌ಗೌಡ, ನಾಗರಾಜರೆಡ್ಡಿ, ಮಲ್ಲಿಕಾರ್ಜುನಪ್ಪ, ಮಹೇಶ್, ಅಶ್ವಥ್, ವೆಂಕಟೇಶ್, ಸಿದ್ದರಾಜು, ಅಜ್ಜು, ಗ್ರಾಮಸ್ಥರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!