ಉದಯವಾಹಿನಿ ಸಿರುಗುಪ್ಪ : ನಗರದ ಶ್ರೀ ಅಭಯಾಂಜನೇಯ್ಯ ಸ್ವಾಮಿ ಹತ್ತಿರದಲ್ಲಿ ತಾಲೂಕು ಕುರುಬ ಸಮಾಜದ ವತಿಯಿಂದ ಪ್ರತಿಷ್ಟಾಪಿಸಲಾದ ಕನಕದಾಸ ಮೂರ್ತಿಯನ್ನು ಕಾಗಿನೆಲೆ ಮಹಾ ಸಂಸ್ಥಾನದ ತಿಂತಿಣ ಬ್ರಿಡ್ಜ್ನ ಕನಕಗುರು ಪೀಠದ ಕಿರಿಯ ಸ್ವಾಮೀಜಿ ಶ್ರೀ ಬೀರಲಿಂಗೇಶ್ವರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಶಾಸಕ ಬಿ.ಎಂ.ನಾಗರಾಜ ಅವರು ಅನಾವರಣಗೊಳಿಸಿದರು.
ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು ಸಮಾಜದಲ್ಲಿ ಶಿಕ್ಷಣದ ಕೊರತೆ ಎದ್ದು ಕಾಣುತ್ತಿದೆ. ಶಿಕ್ಷಣವೆಂಬುದು ಹುಲಿಯ ಹಾಲಿದ್ದಂತೆ ಅದನ್ನು ಕುಡಿದವರು ಮಾತ್ರ ಮೂಲಸೌಲಭ್ಯಗಳನ್ನು ಪಡೆಯಲು ಘರ್ಜಿಸಲು ಸಾಧ್ಯವೆಂದರು.
ಎಲ್ಲಾರು ಮಾಡುವುದು ಹೊಟ್ಟೆಗಾಗಿ ತುತ್ತು ಹಿಟ್ಟಿಗಾಗಿ ಮಾನ ಮುಚ್ಚಲು ಗೇಣು ಬಟ್ಟೆಗಾಗಿ ಎಂಬಂತೆ ನಾವಿರಬಾರದು. ಬರೀ ಮೂರ್ತಿ ಅನಾವರಣಗೊಳಿಸಿ ಜಾಗೃತಿಗೊಳಿಸಿದರೆ ಸಾಲದು ಇಂತಹ ಕಾರ್ಯಕ್ರಮಗಳಲ್ಲಿ ಎಲ್ಲರೂ ಒಟ್ಟಾಗಿ ಬೆರೆತು ಸಮಾಜದ ಪರವಾಗಿ ಶ್ರಮಿಸುವ ಸೋಮಪ್ಪನವರ ಬೆಂಬಲಕ್ಕೆ ನಿಂತು ಹೋರಾಟದ ಮೂಲಕ ಅಗತ್ಯ ಸೌಲಭ್ಯಗಳನ್ನು ಪಡೆಯಬೇಕೆಂದು ತಿಳಿಸಿದರು.
ತಾಲೂಕು ಕುರುಬರ ಸಂಘದ ಅಧ್ಯಕ್ಷ ದಮ್ಮೂರು ಸೋಮಪ್ಪ ಮಾತನಾಡಿ ಕಾರ್ಯಕ್ರಮದಲ್ಲಿ ಖಾಲಿ ಕುರ್ಚಿಗಳನ್ನು ಕಂಡು ಕನಕದಾಸರು ನಮ್ಮ ಮೌಢÀ್ಯವನ್ನು ತೊಲಗಿಸಲು ಅರಮನೆಯ ಅಂತ:ಪುರದಿಂದ ನಾವಿದ್ದೆಲ್ಲೆಗೆ ಬಂದರು. ಆದರೆ ನಾವಿನ್ನೂ ಬದಲಾಗಲಿಲ್ಲವೆಂದು ಸಮಾಜದ ಮೇಲೆ ಹರಿಹಾಯ್ದರು.
ಇದೇ ವೇಳೆ ಮಾಜಿ ಸಂಸದ ವಿರುಪಾಕ್ಷಪ್ಪ, ನಗರ ಪಾಲಿಕೆಯ ಮಾಜಿ ಉಪ ಮೇಯರ್ ಶಶಿಕಲಾ ಮೋಹನ್, ಕುರುಬ ಸಂಘದ ಜಿಲ್ಲಾಧ್ಯಕ್ಷ ಕೆ.ರಾಮಕೃಷ್ಣ, ಸಹಕಾರಿ ಧುರೀಣ ಚೊಕ್ಕಬಸವನಗೌಡ, ತಾ.ಕು.ಸಂಘದ ಪ್ರಧಾನ ಕಾರ್ಯದರ್ಶಿ ಎನ್.ಕರಿಬಸಪ್ಪ, ಖಜಾಂಚಿ ಪೂಜಾರಿ ಪ್ಯಾಟೆಪ್ಪ, ಕಾಂಗ್ರೇಸ್ ಮುಖಂಡ ನರೇಂದ್ರಸಿಂಹ, ಕರ್ನೂಲ್ ಜಿಲ್ಲಾ ಕುರುಬ ಸಂಘದ ಅಧ್ಯಕ್ಷ ಮಾನ್ವಿ ದೇವೇಂದ್ರಪ್ಪ ಹಾಗೂ ಇನ್ನಿತರ ಮುಖಂಡರು ಇದ್ದರು.

Leave a Reply

Your email address will not be published. Required fields are marked *

error: Content is protected !!