ಉದಯವಾಹಿನಿ ,ಬಂಗಾರಪೇಟೆ: ತಾಲ್ಲೂಕಿನ ಕಾಮಸಮುದ್ರ ಹೋಬಳಿಯ ದೋಣಿ ಮಡುಗು ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷರಾದಂತ ಶ್ರೀಮತಿ ಮಂಜುಳಾ ಎಸ್, ಕೆ, ಜಯಣ್ಣ ರವರಿಗೆ ಇಂದು ದೊಡ್ಡಮಡುಗು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಿಂದ ಸನ್ಮಾನ ಇದೇ ಸಂದರ್ಭದಲ್ಲಿ ಕುಂದು ಕೊರತೆಗಳನ್ನು ಹಾಗೂ ಆಟದ ಮೈದಾನವನ್ನು ಬೇಕೆಂದು ಮನವಿ ಮಾಡಿದರು.
ಅದೇ ರೀತಿ ಆ ಭಾಗದ ರಸ್ತೆಗೆ ಸರ್ಕಾರ ಸಾರಿಗೆ ವ್ಯವಸ್ಥೆಯನ್ನು ಮಾಡಬೇಕಾಗಿ ಮಕ್ಕಳು ಹಾಗೂ ಶಿಕ್ಷಕರು ಖಾಸಗಿ ವಾಹನದಲ್ಲಿ ಬರುವಂತ ಪರಿಸ್ಥಿ ಉಂಟಾಗಿದೆ.ಮೂಲಸೌಕರ್ಯಗಳನ್ನು ಒದಗಿಸಬೇಕೆಂದು ನೂತನ ಅಧ್ಯಕ್ಷರಲ್ಲಿ ಮನವಿ ಮಾಡಿದರು, ಇದೇ ಸಂದರ್ಭದಲ್ಲಿ ಅಪಾರ ಅಭಿಮಾನಿಗಳು ಹಾಗೂ ಹಿರಿಯ ಮುಖಂಡರು ಶಾಲೆಯ ಸಿಬ್ಬಂದಿ ವರ್ಗದವರು ಅಭಿನಂದಿಸಿದರು ಈ ಸಂದರ್ಭದಲ್ಲಿ ಅಧ್ಯಕ್ಷರು ಮಾತನಾಡಿ ಇಂದಿನ ಅವಧಿಯಲ್ಲಿ ಎಷ್ಟೆಷ್ಟು ಅವ್ಯವಹಾರ ಹಾಗೂ ಆಡಳಿತ ದುರ್ಬಳಕೆಯಾಗಿದೆಯೋ ಅದನ್ನು ಪರಿಶೀಲಿಸಿ ಶಾಲೆಗೆ ಚೌಚಾಲಯ ಅಡುಗೆ ಕೋಣೆ ಹಾಗೂ ಗಿಡಮರಗಳನ್ನು ಬೆಳೆಸಬೇಕೆಂದು ಬರವಸೆ ನೀಡಿದರು ನಾನಿರುವುದು ನಿಮ್ಮ ಸೇವೆಗಾಗಿ ನನ್ನ ಸೇವೆ 24 / 7 ರೀತಿ ಪಂಚಾಯಿತಿಯ ಯಾವುದೇ ಸಮಸ್ಯೆ ಇದ್ದರೂ ಅದನ್ನು ಸರ್ಕಾರಕ್ಕೆ ಮನವಿ ಮಾಡಿ ಸಮರ್ಪಕವಾಗಿ ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತೇನೆ ಎಂದು ಭರವಸೆ ನೀಡಿದರು.

Leave a Reply

Your email address will not be published. Required fields are marked *

error: Content is protected !!