ಉದಯವಾಹಿನಿ, ನವದೆಹಲಿ: ಭಾರತ ಮಾತೆ ಪ್ರತಿಯೊಬ್ಬ ಭಾರತೀಯನ ಧ್ವನಿ” ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಇಂದಿಲ್ಲಿ ಹೇಳಿದ್ದಾರೆ.
೭೭ನೇ ಸ್ವಾತಂತ್ರ್ಯ ದಿನದಂದು ದೇಶದ ಜನತೆಗೆ ಶುಭಾಶಯ ತಿಳಿಸಿದ ಅವರು ಭಾರತ ಮಾತೆ ಪ್ರತಿಯೊಬ್ಬ ಭಾರತೀಯನ ಧ್ವನಿ ಎಂದು ಬಣ್ಣಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಶುಭಾಶಯ ಕೋರಿರುವ ಅವರು ‘ಭಾರತ್ ಜೋಡೋ ಯಾತ್ರೆಯ ಅನುಭವ ಹಂಚಿಕೊಂಡ ಅವರು ಸಮುದ್ರದ ಅಂಚಿನಲ್ಲಿ ನೂರ ನಲವತ್ತೈದು ದಿನಗಳ ನಡಿಗೆಯ ಮೂಲಕ ಕಾಶ್ಮೀರದ ಮೃದುವಾದ ಹಿಮವನ್ನು ತಲುಪಿದ ಅನುಭವ ಹಂಚಿಕೊಂಡು ಜನರಿಗೆ ಧನ್ಯವಾದ ಹೇಳಿದ್ದಾರೆ
ಕಳೆದ ವರ್ಷ ನಾನು ಮನೆ ಎಂದು ಕರೆಯುವ ಭೂಮಿಯಲ್ಲಿ ನೂರ ನಲವತ್ತೈದು ದಿನಗಳನ್ನು ಕಳೆದಿದ್ದೇನೆ. ಸಮುದ್ರದ ಅಂಚಿನಲ್ಲಿ ಪ್ರಾರಂಭಿಸಿ ಶಾಖ, ಧೂಳು ಮತ್ತು ಮಳೆಯ ಮೂಲಕ ನಡೆದಿದ್ದೇನೆ. ಕಾಡುಗಳು, ಪಟ್ಟಣಗಳು ಮತ್ತು ಬೆಟ್ಟಗಳ ಮೂಲಕ ನನ್ನ ಪ್ರೀತಿಯ ಕಾಶ್ಮೀರ ತಲುಪಿದ್ದು ಖುಷಿಕೊಟ್ಟಿದೆ.ಈ ವೇಳೆ ಜನರ ನೋವು ಅರ್ಥ ಮಾಡಿಕೊಂಡಿದ್ದೇನೆ ಎಂದಿದ್ಧಾರೆ.

Leave a Reply

Your email address will not be published. Required fields are marked *

error: Content is protected !!