
ಉದಯವಾಹಿನಿ, ನವದೆಹಲಿ: ಭಾರತ ಮಾತೆ ಪ್ರತಿಯೊಬ್ಬ ಭಾರತೀಯನ ಧ್ವನಿ” ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಇಂದಿಲ್ಲಿ ಹೇಳಿದ್ದಾರೆ.
೭೭ನೇ ಸ್ವಾತಂತ್ರ್ಯ ದಿನದಂದು ದೇಶದ ಜನತೆಗೆ ಶುಭಾಶಯ ತಿಳಿಸಿದ ಅವರು ಭಾರತ ಮಾತೆ ಪ್ರತಿಯೊಬ್ಬ ಭಾರತೀಯನ ಧ್ವನಿ ಎಂದು ಬಣ್ಣಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಶುಭಾಶಯ ಕೋರಿರುವ ಅವರು ‘ಭಾರತ್ ಜೋಡೋ ಯಾತ್ರೆಯ ಅನುಭವ ಹಂಚಿಕೊಂಡ ಅವರು ಸಮುದ್ರದ ಅಂಚಿನಲ್ಲಿ ನೂರ ನಲವತ್ತೈದು ದಿನಗಳ ನಡಿಗೆಯ ಮೂಲಕ ಕಾಶ್ಮೀರದ ಮೃದುವಾದ ಹಿಮವನ್ನು ತಲುಪಿದ ಅನುಭವ ಹಂಚಿಕೊಂಡು ಜನರಿಗೆ ಧನ್ಯವಾದ ಹೇಳಿದ್ದಾರೆ
ಕಳೆದ ವರ್ಷ ನಾನು ಮನೆ ಎಂದು ಕರೆಯುವ ಭೂಮಿಯಲ್ಲಿ ನೂರ ನಲವತ್ತೈದು ದಿನಗಳನ್ನು ಕಳೆದಿದ್ದೇನೆ.
