ಉದಯವಾಹಿನಿ, ನವದೆಹಲಿ: ದೇಶ ಹೊಸ ಸಂಕಲ್ಪಗಳೊಂದಿಗೆ ಅಮೃತ ಕಾಲ ಪ್ರವೇಶಿಸಿದೆ. 2047ರ ವೇಳೆಗೆ ಭಾರತವನ್ನು ಅಭಿವೃದ್ದಿ ಹೊಂದಿದ ರಾಷ್ಟವನ್ನಾಗಿ ಮಾಡಲುಬ ಪ್ರತಿಜ್ಞೆ ಮಾಡೋಣ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಕರೆ ನೀಡಿದ್ದಾರೆ
ಜನರು ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವವನ್ನು ಸಂಭ್ರದಿಂದ ಆಚರಿಸುತ್ತಿದ್ದಾರೆ. ಭಾರತದ ಪ್ರಜೆಯಾಗಿ ಎಲ್ಲರಿಗೂ ಸಮಾನ ಅವಕಾಶಗಳು , ಸಮಾನ ಹಕ್ಕುಗಳು ಮತ್ತು ಸಮಾನ ಕರ್ತವ್ಯಗಳಿವೆ. ನವಭಾರತದ ಮಹತ್ವಾಕಾಂಕ್ಷಿಗಳ ಹೊಸ ದಿಗಂತಗಳು ಅಪರಿಮಿತವಾಗಿವೆ ಎಂದಿದ್ದಾರೆ.
77ನೇ ಸ್ವಾತಂತ್ರ್ಯೋತ್ಸವದ ಮುನ್ನಾ ದಿನವಾದ ಇಂದು ದೇಶವನ್ನುದ್ದೇಶಿಸಿ ಅವರು, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ- ಇಸ್ರೋ, ಹೊಸ ಎತ್ತರವನ್ನು ಸೇರುತ್ತಿದೆ. ಇನ್ನೂ ಕೆಲವೇ ದಿನಗಳಲ್ಲಿ ಚಂದ್ರಯಾನ -3 ಚಂದ್ರನ ಕಕ್ಷೆ ಸೇರಲಿದೆ. ಆ ಕ್ಷಣಕ್ಕಾಗಿ ಇಡೀ ದೇಶ ಕಾತುರದಿಂದ ಕಾಯುತ್ತಿದೆ ಎಂದರು.
ವೈಯಕ್ತಿಕ ಮತ್ತು ಸಾಮೂಹಿಕ ಚಟುವಟಿಕೆಗಳ ಮೂಲಕ ಎಲ್ಲ ಕ್ಷೇತ್ರಗಳಲ್ಲಿ ಉತ್ಕೃಷ್ಟತೆಯತ್ತ ಸಾಗಲು ನಿರಂತರ ಪ್ರಯತ್ನಗಳನ್ನು ಮಾಡೋಣ. ದೇಶ ಪ್ರಗತಿಯೊಂದಿಗೆ ಶ್ರದ್ಧೆ ಮತ್ತು ಸಾಧನೆಯ ಹೊಸ ಎತ್ತರಕ್ಕೆ ಕೊಂಡೊಯ್ಯಲು ಶ್ರಮಿಸೋಣ ಎಂದರು.
