ಉದಯವಾಹಿನಿ, ದೇವದುರ್ಗ : 76 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ತಾಲೂಕ ಪಂಚಾಯತಿ ದೇವದುರ್ಗದಲ್ಲಿ ಧ್ವಜಾರೋಹಣ ಕಾರ್ಯಕ್ರಮವನ್ನು ತಾಲೂಕ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಮರೆಡ್ಡಿ ಪಾಟೀಲ್ ನೇರೆವೆರಿಸಿದರು ಸುಮಾರು 200 ವರ್ಷಗಳಿಂದ ನಮ್ಮ ದೇಶಕ್ಕಾಗಿ ಸ್ವತಂತ್ರ್ಯವನ್ನು ತಂದುಕೊಡಲು ಹಲವಾರು ನಾಯಕರು ತಮ್ಮ ಪ್ರಾಣ ತ್ಯಾಗವನ್ನು ಲೆಕ್ಕಿಸದೆ ದೇಶಕ್ಕಾಗಿ ನಮ್ಮ ಮಣ್ಣಿಗಾಗಿ ಹಗಲಿರಲು ಸೇವೆ ಸಲ್ಲಿಸಿದ್ದರಿಂದ ಇಂದು ನಾವೆಲ್ಲರೂ ಸುಖವಾಗಿರಲು ಕಾರಣ ಹಾಗೂ ಗಡಿ ಭಾಗದಲ್ಲಿ ಮಳೆ ಚಳಿ ಗಾಳಿಯನ್ನದೆ ನಮ್ಮ ದೇಶವನ್ನು ಕಾಯುತ್ತಿದ್ದಾರೆ. ನಾವು ಭಾರತೀಯರು ವಿವಿಧ ಭಾಷೆ ಧರ್ಮ ಜಾತಿ ಲೆಕ್ಕಿಸದೆ ಭಾರತ ಮಾತೆಯ ಸೇವೆಯನ್ನು ಮಾಡಿದಲ್ಲಿ ನಾವೆಲ್ಲರೂ ಧನ್ಯರು ಇದೇ ಸಮಯದಲ್ಲಿ ನಮ್ಮ ತಾಲೂಕಿನ ಮಾಜಿ ಯೋಧರರಾದ ಅಣ್ಣಾರಾವ್ ಸಹಾಯಕ ನಿರ್ದೇಶಕರು ಪಂ.ರಾಜ್ಯ ಹಾಗೂ ಚೆನ್ನರೆಡ್ಡಿ ಮಾಜಿ ಸೈನಿಕರು ಹಾಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸನ್ಮಾನವನ್ನು ಮಾಡಲಾಯಿತು. ಕೇಂದ್ರ ಹಾಗೂ ರಾಜ್ಯ ಸರ್ಕಾರ ನನ್ನ ಮಣ್ಣು ನನ್ನ ದೇಶ ಕಾರ್ಯಕ್ರಮದಿಂದ ಪ್ರತಿಯೊಂದು ಗ್ರಾಮದಲ್ಲಿ ಮಣ್ಣನ್ನು ಸಂಗ್ರಹಣೆ ಮಾಡಿ ದೆಹಲಿ ಕಛೇರಿಗೆ ಕಳಿಸುವದು ವಿನೂತನ ಕಾರ್ಯಕ್ರಮ ಹಾಕಿರುತ್ತದೆ . ಇದೇ ಸಂದರ್ಭದಲ್ಲಿ ಬಸಣ್ಣ ನಾಯಕ ಸಹಾಯಕ ನಿರ್ದೇಶಕರು ಅಣ್ಣರಾವ್ ಸಹಾಯಕ ನಿರ್ದೇಶಕರು ಪಂ.ರಾಜ್ಯ ತಾಲೂಕ ಪಂಚಾಯತಿ ಸಿಬ್ಬಂದಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!