ಮಹೇಬೂಬಶಾ ಅಣವಾರ
ಉದಯವಾಹಿನಿ ವಿಶೇಷ ವರದಿ
ಉದಯವಾಹಿನಿ, ಚಿಂಚೋಳಿ: ತಾಲ್ಲೂಕಿನ ಗರಗಪಳ್ಳಿ ಗ್ರಾಮದ ಶರಣಪ್ಪ ನೀಲಪ್ಪ ಎಂಬ ರೈತ ಅವರ ಸ್ವತಃ ಜಮೀನು ಸರ್ವೇ ನಂ.137ರ ಒಂದು ಏಕರೆ ಜಮೀನಿನಲ್ಲಿ 315 ಸೀಬೆ ಹಣ್ಣಿನ ಅಲಹಾಬಾದ್ ಸಪೇದ್ ಸಸಿಗಳನ್ನು ನೆಟ್ಟು ಸಾರ್ವಜನಿಕರು ಕುಡಿದು ಬೀಸಾಕುವ ಫೀಲ್ಟರ್ ನೀರಿನ ಬಾಟಲ್ ಗಳನ್ನು ಒಗ್ಗೂಡಿಸಿ ನೀರು ಪೋಲಾಗದಂತೆ ಬಾಟಲ್ ಮೂಲಕ ರೋಗಿಗಳಿಗೆ ಗೂಲ್ಕೋಸ್ ಹಚ್ಚುವ ರೀತಿಯಲ್ಲಿ ಸಸಿಗಳಿಗೆ (ಬೆಳೆಗೆ) ನೀರುಣಿಸುತ್ತಿದ್ದು ಎಲ್ಲೋರ ಹುಬ್ಬೇರುವಂತೆ ರೈತನು ಬೆಳೆ ಬೆಳೆಸುತ್ತಿದ್ದಾನೆ.
ನರೇಗಾ ಯೋಜನೆ ಯಡಿಯಲ್ಲಿ ಸಹಾಯಧನ ಸಿಗುವ ವಿಶ್ವಾಸವಿಟ್ಟು ಸುಮಾರು 50ಸಾವಿರ ರೂಪಾಯಿ ವೆಚ್ಚ ಮಾಡಿ ಒಂದು ಏಕರೆ ಜಮೀನಿನಲ್ಲಿ 10 ಫೀಟ್ ಗೊಂದ್ದು ಸೀಬೆ ಹಣ್ಣಿನ ಸಿಸಿಗಳು ನೆಟ್ಟಿ ಬೆಳೆ ಬೆಳೆಸುತ್ತಿದ್ದು ಸುಮಾರು 1,20,000ರೂಪಾಯಿ ಆದಾಯ ಬರುವ ನಿರೀಕ್ಷೆಯಲ್ಲಿದ್ದೇನೆ ಎಂದು ರೈತ ಶರಣಪ್ಪ ನೀಲಪ್ಪ ತಿಳಿಸಿದ್ದಾರೆ.
ಕುಡಿಯುವ ನೀರಿನ ಬಾಟಲ್:- ಸಾರ್ವಜನಿಕರು ಶುದ್ದ ಕುಡಿಯುವ ನೀರಿನ ಫೀಲ್ಟರ್ ನೀರಿನ ಬಾಟಲ್ ಕುಡಿದು ಬೀಸಾಕುವ ಬಾಟಲ್ ಹೊಸ ಉಪಯೋಗ ಮಾಡಿ ಆಸ್ವತ್ರೆಯಲ್ಲಿ ರೋಗಿಗಳಿಗೆ ಹಚ್ಚುವ ಗೂಲ್ಕೋಸ್ ತರಹ ಸಸಿಗಳಿಗೆ ಗುಲ್ಕೋಸ್ ತರಹ ನೀರು ಹರಿಸುತ್ತಿರುವುದು ತಾಲ್ಲೂಕಿನಲ್ಲಿಯೇ ಮೊಟ್ಟ ಮೊದಲು ಸುತ್ತಮುತ್ತಲಿನ ರೈತರು ಹುಬ್ಬೆರುವಂತೆ ಮಾಡಿ ಬೆಳೆ ಬೆಳೆಸುತ್ತಿದ್ದಾರೆ.
ಇದರಿಂದ ನೀರು ವ್ಯರ್ಥವಾಗುವುದು ತಪ್ಪುತ್ತದೆ ಹಾಗೂ ಸಸಿಗೆ ಬೇಕಾದಷ್ಟೆ ನೀರು ಉಣಿಸಬಹುದು ಜಮೀನಿನಲ್ಲಿ ಹುಲ್ಲು ಬೆಳೆಯುವುದು ಲಾಗೋಡಿ ತಪ್ಪುತ್ತದೆ ಇದರಿಂದ ಸಸಿಯ ಬೇರಿಗೆ ನೀರು ಚನ್ನಾಗಿ ಸರಬರಾಜು ಆಗುತ್ತಿರುವುದರಿಂದ ಬೆಳೆ ಉತ್ತಮವಾಗಿ ಬೆಳೆಸಬಹುದು ಎಂಬುವುದು ರೈತರ ಅಭಿಪ್ರಾಯವಾಗಿದೆ.
ನೀರಿನ ಬಾಟಲಿ ಮೂಲಕ ಬೆಳೆಗೆ ನೀರುಣಿಸುವುದು ಅಚ್ಚರಿಯೇ ಸರಿ ಆದರೆ ಸತ್ಯ.
ತಾಲ್ಲೂಕಿನ ಗರಗಪಳ್ಳಿ ಗ್ರಾಮದ ಉದ್ಯೋಗ ಖಾತ್ರಿಯಲ್ಲಿ ಸೀಬೆ ಹಣ್ಣಿನ ಸಸಿಗಳು ಹಚ್ಚುವ ನೂತನ ಮಾದರಿಯಲ್ಲಿ ಕುಡಿದು ಬೀಸಾಕುವ ನೀರಿನ ಬಾಟಲ್ ಅನ್ನು ನನ್ನ ಸ್ವತಃ ಬುದ್ದಿವಂತಿಕೆಯಿಂದ ಡ್ರೀಪ್ ಮಾಡಿ ಒಂದು ಏಕರೆ ಜಮೀನಿನಲ್ಲಿ 10ಫೀಟ್ ಗೆ ಒಂದು 315 ಸೀ
ಬೆ ಹಣ್ಣಿನ ಸಸಿಗಳು ನೆಟ್ಟು ಆಸ್ವತ್ರೆಯಲ್ಲಿ ರೋಗಿಗಳಿಗೆ ಗೂಲ್ಕೋಸ್ ಹಚ್ಚುವ ರೀತಿಯಲ್ಲಿ ಪ್ರತಿಯೊಂದು ಸಸಿಗಳಿಗೆ ಒಂದೊಂದು ಬಾಟಲ್ ನೆತುಹಾಕಿ ಡ್ರಿಪ್ ಮಾಡಿ ವ್ಯವಸಾಯ ಮಾಡುತ್ತಿದ್ದೇವೆ ಉತ್ತಮವಾದ ಆದಾಯ ಬರುವ ನಿರೀಕ್ಷೆ ಮಾಡಿದ್ದೇವೆ.ಇನ್ನು ರಾಜ್ಯ ಸರ್ಕಾರ ನೂತನವಾಗಿ ಯೋಜನೆಯಗಳು ರೂಪಿಸಿದರೆ ರೈತರಿಗೆ ಅನುಕೂಲವಾಗುತ್ತದೆ ಇದರಿಂದ ರೈತರು ಆರ್ಥಿಕವಾಗಿ ಬೆಳೆಯಲು ಸಾಧ್ಯವಾಗುತ್ತದೆ.
:– ಕೆ.ಮಹೇಶ
