ಉದಯವಾಹಿನಿ, ಶಿಡ್ಲಘಟ್ಟ : ಬ್ರಿಟೀಷರ ಆಳ್ವಿಕೆಯ ಸಮಯದಲ್ಲಿ, ದೇಶದ ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದ ಗಣ್ಯರ ಹೋರಾಟ, ತ್ಯಾಗ, ಬಲಿದಾನಗಳನ್ನು ಈ ಸಂದರ್ಭದಲ್ಲಿ ಸ್ಮರಿಸಿ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗ್ರಾಮ ಪಂಚಾಯಿತಿ ಸದಸ್ಯ ಸಿ ವೆಂಕಟೇಶಪ್ಪ ನಮಿಸಿದರು.
ಶಿಡ್ಲಘಟ್ಟ ತಾಲೂಕಿನ ದೊಡ್ಡತೇಕಹಳ್ಳಿ ಗ್ರಾಮ ಪಂಚಾಯಿತಿಯ ಚಿಕ್ಕತೇಕಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಸರ್ಕಾರಿ ಶಾಲೆಗಳನ್ನು ಉಳಿಸಿ ಮತ್ತು ಬೆಳೆಸಿ ಎಂಬ ನಾಣ್ಣುಡಿಯನ್ನು ಗ್ರಾಮದ ಯುವಕರು ಪೋಷಕರಿಗೆ ಅರಿವು ಮೂಡಿಸಿ ಮಕ್ಕಳಿಗೆ ಸಮವಸ್ತ್ರವನ್ನು ವಿತರಿಸಲಾಯಿತು.
ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಸಮಾಜಸೇವಕ ಅಂಜಿನಪ್ಪ ಪುಟ್ಟು ರವರ ಅಭಿಮಾನಿಗಳು ಅಂಗನವಾಡಿ ಹಾಗೂ ಶಾಲೆಯ ಎಲ್ಲ ಮಕ್ಕಳಿಗೂ ನೀರಿನ ಬಾಟಲ್ ವಿತರಿಸಿದರು.
ಇನ್ನು ಎಸ್‌ಡಿಎಂಸಿ ಅಧ್ಯಕ್ಷ ಸಿಎಂ ಮಂಜುನಾಥ್ ಅವರು ಅಂಗನವಾಡಿಯ ಮಕ್ಕಳಿಗೆ ಕಪ್ಪು ಹಲಿಗೆ (ಸ್ಲೇಟ್) ವಿತರಿಸಿದರೆ ಗಜೇಂದ್ರ ವಿವಿಧ ರೀತಿಯ ಸ್ಪರ್ಧೆಗಳಲ್ಲಿ ಜಯಸಿದ ಮಕ್ಕಳಿಗೆ ಕುಡಿಯುವ ನೀರಿನ ಗ್ಲಾಸ್ ವಿತರಿಸಿದರು. ನಂತರ ಎನ್ ಚನ್ನಕೇಶವ ಎಲ್ಲಾ ಮಕ್ಕಳಿಗೂ ನೋಟ್ ಪುಸ್ತಕ ವಿತರಿಸಿದರು. ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಎಲ್ಲ ಮಕ್ಕಳಿಗೂ ಹಾಗೂ ಪೋಷಕರಿಗೂ ಶಾಲಾ ಮುಖ್ಯ ಶಿಕ್ಷಕ ನರಸಿಂಹಮೂರ್ತಿ ಸಿಹಿ ಹಂಚಿ ದಿನಾಚರಣೆಯ ಶುಭಾಶಯಗಳು ತಿಳಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಸೀತಾರಾಮಪ್ಪ, ಎಸ್ ಡಿ ಎಂ ಸಿ ಅಧ್ಯಕ್ಷ ಸಿಎಂ ಮಂಜುನಾಥ್, ನಾರಾಯಣಸ್ವಾಮಿ ಮಂಜುನಾಥ್ ದೇವರಾಜ್ ಎನ್ ಶ್ರೀರಾಮ್ ಎಲ್ ಸುನಿಲ್ ನವೀನ್ ಕುಮಾರ್ ಎಂ, ಎನ್ ರವಿ ಅನೀಲ್ ಕುಮಾರ್ ಅಂಗನವಾಡಿ ಶಿಕ್ಷಕಿ ರಾಧಮ್ಮ ಅಡುಗೆ ಸಹಾಯಕಿ ಲಕ್ಷ್ಮಿದೇವಮ್ಮ ಪೋಷಕರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!