ಉದಯವಾಹಿನಿ,ಚಿಂಚೋಳಿ: ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕ ಮಹಾಪುರುಷರ ತ್ಯಾಗ ಬಲಿದಾನದ ಅಂಗವಾಗಿ ದೇಶಕ್ಕೆ ಸ್ವಾತಂತ್ರ್ಯ ದೊರಕಿದೆ,ಭಾರತ ದೇಶವು ವಿವಿಧತೆಯಲ್ಲಿ ಏಕತೆಯಿಂದ ಕೂಡಿದೆ ಎಂದು ಶಾಸಕ ಡಾ.ಅವಿನಾಶ ಜಾಧವ ಹೇಳಿದರು.
ಪಟ್ಟಣದ ತಾಲ್ಲೂಕಾ ಕ್ರೀಡಾಂಗಣ ಮೈದಾನದಲ್ಲಿ ತಾಲ್ಲೂಕಾ ಆಡಳಿತ ವತಿಯಿಂದ ಹಮ್ಮಿಕೊಂಡ 77ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು,ಸ್ವಾತಂತ್ರ್ಯವಾಗಿ 76ವರ್ಷ ಪೂರೈಸಿ 77ನೇ ವರ್ಷದಲ್ಲಿ ಸಂತೋಷದಿಂದ ಪಾದಾರ್ಪಣೆ ಮಾಡುತ್ತಿದ್ದೇವೆ.
ಭಾರತ ದೇಶದ ಸಂವಿಧಾನವೆ ಪವಿತ್ರ ಗ್ರಂಥಾವಾಗಿದೆ,ತಾಲ್ಲೂಕಿನಲ್ಲಿ ವಾಗ್ದಾನ ನೀಡಿದಂತೆ ಸಕ್ಕರೆ ಕಾರ್ಖಾನೆಯ ಪ್ರಾರಂಭವಾಗಿದೆ ಬರುವ ದಿನಗಳಲ್ಲಿ ಸಾಕಷ್ಟು ನಿರುದ್ಯೋಗ ಯುವಕರಿಗೆ ಉದ್ಯೋಗ ಸೃಷ್ಟಿಯಾಗಲಿದೆ,ತಾಲ್ಲೂಕಿನಾದ್ಯಂತ ರೈತರಿಗೋಸ್ಕರ ಅನೇಕ ಬ್ರೀಜ್ ಕಂ ಬ್ಯಾರೇಜ್ ಗಳು ನಿರ್ಮಾಣ ಮಾಡಲಾಗಿದ್ದು,ಡಾಂಬರಿಕರಣ ರಸ್ತೆಗಳು,ಸಿಸಿ ರಸ್ತೆಗಳು,ಕುಡಿಯುವ ನೀರು,ಮೂಲಭೂತ ಸೌಕರ್ಯ ಒದಗಿಸಲಾಗಿದ್ದು,ಹೀಗೆ ಅನೇಕ ಅಭಿವೃದ್ಧಿ ಕಾಮಗಾರಿಗಳು ಆಗಿವೆ ಮುಂಬರುವ ದಿನಗಳಲ್ಲಿ ಇನ್ನು ಅಭಿವೃದ್ಧಿ ಕೆಲಸಗಳು ಆಗಲಿವೆ ಸರ್ಕಾರ ಯಾವುದೇ ಇರಲಿ ಜನಪರ ಕೆಲಸ ಮಾಡುತ್ತವೆ,ತಾಲ್ಲೂಕಿನ ಅಭಿವೃದ್ಧಿಗಾಗಿ ಸಿಎಂ ಹತ್ತಿರ ಹೋಗಿ ಅನುದಾನಕ್ಕಾಗಿ ಮನವಿ ಮಾಡಲಾಗುವುದು ಎಂದರು.
ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿರವರು 77ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು ಸ್ವಾತಂತ್ರ್ಯ ಹೋರಾಟಗಾರ ಪರಿಶ್ರಮದಿಂದ ಸ್ವಾತಂತ್ರ್ಯದ ಅಮೃತ ಮಹೋತ್ಸವನ್ನು ವಿಜೃಂಭಣೆಯಿಂದ ಆಚರಣೆ ಮಾಡಿ 77ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವುದು ಸಂತೋಷದ ವಿಷಯವಾಗಿದೆ.
ದೇಶದ ಪ್ರತಿಯೊಂದು ಪ್ರಜೆಗಳಲ್ಲಿ ದೇಶಭೀಮಾನ ಇರಬೇಕು,ಕಿತ್ತೂರು ರಾಣಿ ಚೆನ್ನಮ್ಮ,ಜಾನ್ಸಿರಾಣಿ ಲಕ್ಷ್ಮೀಬಾಯಿ,ಬಾಲಗಂಗಾಧರ್ ತಿಲಕ್,ಲಾಲಾ ಲಜಪತ್ ರಾಯ್,ಚಂದ್ರಶೇಖರ್ ಆಜಾದ್,ಸುಭಾಷ್ ಚಂದ್ರಬೋಸ್,ಭಗತ್ ಸಿಂಗ್,ಮಹಾತ್ಮ ಗಾಂಧೀಜಿ ದಾದಾಬಾಯಿ ನವರೋಜಿ ಅಂತಹ ಮಹಾನ್ ನಾಯಕರು ಕೆಚ್ಚೆದೆಯಿಂದ ಹೋರಾಟ ಮಾಡಿ ಬ್ರಿಟಿಷ್ ರನ್ನು ಸದೆಬಡಿದರು.
1942 ರಲ್ಲಿ ಭಾರತ ಬಿಟ್ಟು ತೊಲಗಿ ಎಂಬ ಕ್ರಾಂತಿ ಮೊಳಗಿತ್ತು ಗಾಂಧೀಜಿಯವರು ಮಾಡು ಇಲ್ಲವೆ ಮಡಿ ಎಂದು ಕರೆಕೊಟ್ಟರು ಹೀಗೆ ಸ್ವಾತಂತ್ರ್ಯದ ಜ್ವಾಲೆ ಇಡೀ ದೇಶದ ತುಂಬಾ ಹರಡಿತು .
ಕೊನೆಗೆ 1947 ಆಗಸ್ಟ್ 15 ರಂದು ನಮ್ಮ ದೇಶ ಬ್ರಿಟಿಷರಿಂದ ಸ್ವಾತಂತ್ರ್ಯವಾಯಿತು ಎಂದರು.
ಅಶೋಕ ಹೂವಿನಭಾವಿ ಸ್ವಾಗತಿಸಿ ನಿರೂಪಿಸಿದರು.
ಡಿವೈಎಸ್ಪಿ ಕೆ.ಬಸವರಾಜ ವಂದಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಕಾಶಿನಾಥ ಧನ್ನಿ,ತಾಪಂ.ಇಓ ಶಂಊರ ರಾಠೋಡ್,ಗ್ರೇಡ್ 2 ತಹಸೀಲ್ದಾರ್ ವೆಂಕಟೇಶ ದುಗ್ಗನ್,ಸಿಪಿಐ ಅಂಬರಾಯ,ಬಿಇಓ ರಾಠೋಡ್,ಆರ್.ಐ.ರವಿಕುಮಾರ ಚಿಟ್ಟಾ,ಸುಭಾಷ್ ನಿಡಗುಂದಿ,ಕೇಶವ ಕುಲಕರ್ಣಿ,ಟಿಹೆಚ್ಓ ಡಾ.ಮಹ್ಮುದ್ ಗಫಾರ,ನಾಗಶೇಟ್ಟಿ ಭದ್ರಶೇಟ್ಟಿ,ನಾಗೇಂದ್ರಪ್ಪಾ ಬೆಡಕಪಳ್ಳಿ,ಮಲ್ಲಿಕಾರ್ಜುನ ಪಾಲಾಮೋರ್,ಶ್ರೀಮಂತ ಕಟ್ಟಿಮನಿ,ಕೆಎಂ ಬಾರಿ,ಉಮಾಪಾಟೀಲ,ಗಣಪತರಾವ,ಸಂತೋಷ ಗಡಂತಿ,ಶಾಮರಾವ ಕೊರವಿ,ಪ್ರೇಮಸಿಂಗ್ ಜಾಧವ,ರಾಜು ಪವಾರ,ಉಲ್ಲಾಸಕುಮಾರ,ಮಲ್ಲಿಕಾರ್ಜುನ ನೆಲ್ಲಿ,ಅಶೋಕ ಚವ್ಹಾಣ,ಜಗನ್ನಾಥ,ಕಾಶಿನಾಥ ನಾಟೀಕಾರ,ಶಂಕರಜೀ ಹೂವಿನಹಿಪ್ಪರಗಿ,ಗಿರಿರಾಜ ನಾಟೀಕಾರ,ಮಚೇಂದ್ರ,ಶ್ರೀಕಾಂತ ಜಾನಕಿ,ಅನೇಕರಿದ್ದರು. ಪಿಎಸ್ಐ ಹಣಮಂತ ಬಂಕಲಗಿ ನೇತೃತ್ವದಲ್ಲಿ ಪೋಲಿಸ್ ಪಥಾ ಸಂಚಾಲನ ಮಾಡಿದ್ದರು.ತಾಲ್ಲೂಕಿನ ವಿವಿಧ ಶಾಲೆಗಳ ಶಾಲಾಮಕ್ಕಳಿಂದ ಸಂಸ್ಕೃತಿಕ ಕಾರ್ಯಕ್ರಮ ನಡೆದವು,ಸಂಸ್ಕೃತಿಕ ಕಾರ್ಯಕ್ರಮದ ಉತ್ತಮವಾಗಿ ಪ್ರದರ್ಶನ ಮಾಡಿದ ಶಾಲೆಯ ಮಕ್ಕಳಿಗೆ ಮೊದಲನೇಯ ಎರಡನೇಯ ಹಾಗೂ ಮೂರನೇ ಸ್ಥಾನದಲ್ಲಿ ಗೆಲುವು ಸಾಧಿಸಿದ ಶಾಲಾ ಮಕ್ಕಳಿಗೆ ಶಾಸಕರಿಂದ ಹಾಗೂ ತಹಸೀಲ್ದಾರ್ ರಿಂದ ಬಹುಮಾನ ವಿತರಿಸಲಾಯಿತು.

Leave a Reply

Your email address will not be published. Required fields are marked *

error: Content is protected !!