
ಉದಯವಾಹಿನಿ, ಸಿಂಧನೂರು: ಜಾಲಿಹಾಳ ಗ್ರಾಮದ ಸರಕಾರಿ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜಿನಲ್ಲಿ 77ನೇ ಯ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು ಪ್ರೌಢಶಾಲೆಯ ಧ್ವಜಾರೋಹಣವನ್ನು ಎಸ್ಡಿಎಂಸಿ ಅಧ್ಯಕ್ಷರಾದ ಮರಿಯಪ್ಪ ಅವರು ನೆರವೇರಿಸಿದರು ಪದವಿಪೂರ್ವ ಕಾಲೇಜಿನ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ ಪಂಪಾ ರೆಡ್ಡಪ್ಪ ಹೆಡಗಿನಾಳ ಅವರು ಧ್ವಜಾರೋಹಣ ಮಾಡಿದರು.
ಈ ಸಂದರ್ಭದಲ್ಲಿ ಸ್ವಾತಂತ್ರ್ಯ ಶ್ರೀಮಂತರ ಪಾಲಾಗದೆ ಜನಸಾಮಾನ್ಯರ ನೆರಳಾಗಬೇಕೆಂದು ಡಾ. ಹುಸೇನಪ್ಪ ಅಮರಾಪುರ ತಿಳಿಸಿದರು. ಹಾಗೆಯೇ ಸ್ವಾತಂತ್ರ್ಯವೆಂಬದು ಸಮಾನತೆಯನ್ನು ಆದರಿಸಿರುತ್ತದೆ. ಆ ಸಮಾನತೆ ಇಲ್ಲದ ಸ್ವಾತಂತ್ರ್ಯ ಸ್ವಾತಂತ್ರ್ಯವೇ ಅಲ್ಲವೆಂದು ಹೇಳಿದರು. ಹೆಣ್ಣನ್ನು ತಾಯಿ ಎಂದು ಪೂಜಿಸುವ ಈ ನೆಲದಲ್ಲಿ ಹೆಣ್ಣನ್ನು ತುಚ್ಚವಾಗಿ ಹೀನವಾಗಿ ನೋಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. Box
ಹಾಗಾಗಿ ಹೆಣ್ಣನ್ನು ಯಾವಾಗ ತಾಯಿ ತಂಗಿ, ಸಹೋದರಿ ಎಂದು ಗೌರವಿಸಲ್ಪಡುತ್ತದೆಯೋ ಆಗ ಮಾತ್ರ ನಿಜವಾದ ಸ್ವಾತಂತ್ರ್ಯ ದಕ್ಕಿದಂತಾಗುತ್ತದೆ. ಹೆಣ್ಣಿಗೆ ದೇವಿ ಸ್ಥಾನ ಕೊಡದೆ ತಾಯಿ ಸ್ಥಾನವನ್ನು ಕೊಟ್ಟರೆ ಈ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು ಸಾರ್ಥಕವಾಗುತ್ತದೆ ಎಂದು ವಿವರಿಸಿದರು.box
ಹಾಗೆಯೇ ಜಾಲಿಹಾಳದ ಎಸ್‌ಎಂಟಿ ಸಹಕಾರಿ ಸಂಘ ಬ್ಯಾಂಕಿನವರು ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಎಸ್ ಎಸ್ ಎಲ್ ಸಿ ಯಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ 10000 5000 ಮತ್ತು 2500 ಗಳನ್ನು ಬಹುಮಾನವಾಗಿ ನೀಡಿದರು. ವೇದಿಕೆ ಮೇಲೆ ಪ್ರೌಢಶಾಲೆಯ ಮುಖ್ಯ ಗುರುಗಳಾದ ಮಾಳಪ್ಪ, ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಮುರುಡಯ್ಯ ಸ್ವಾಮಿ, ವಿಜಯಕುಮಾರ್, ರೆಡ್ಡಪ್ಪ ಹಳ್ಳಿ ಚಂದ್ರಶೇಖರ್ ವಲ್ಕಂದಿನ್ನಿ, ಕಾಳಿಂಗ ರೆಡ್ಡಿ, ವೆಂಕಟೇಶ್ ಬುಕ್ಕನಟ್ಟಿ, ಶಿಕ್ಷಕರಾದ ರಮೇಶ್ ಊರಿನ ಮುಖಂಡರಾದ ಉಮಾಪತೆಪ್ಪ, ಘನಮಠದಯ್ಯ ಸ್ವಾಮಿಗಳು ಮುಂತಾದವರು ಹಾಜರಿದ್ದರು.
