ಉದಯವಾಹಿನಿ, ಶಿಡ್ಲಘಟ್ಟ: 77 ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಶಿಡ್ಲಘಟ್ಟ ತಾಲೂಕಿನ ದೊಡ್ಡತೇಕಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ 2022-23ನೇ ಸಾಲಿನ SSLC ಮುಖ್ಯ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಸಿಂದು,ತುಳಸಿ, ದರ್ಶನ್ ಎಸ್ ಇವರುಗಳಿಗೆ ಪ್ರಥಮ ದ್ವಿತೀಯ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಗ್ರಾಮದ ಮುರಳಿ ಹಾಗೂ ಯುವಕರಿಂದ ಪ್ರೋತ್ಸಾಹ ಧನ ನೀಡಲಾಯಿತು. ಹಾಗೆಯೇ 10 ವಿದ್ಯಾರ್ಥಿಗಳಿಗೆ ದಾಖಲೆಗಳನ್ನು ಇಡುವ ಫೈಲ್ಗಳನ್ನು ಶಾಲೆಯಿಂದ ವಿತರಿಸಲಾಯಿತು.

ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಸಮಾಜಸೇವಕ ಆಂಜಿನಪ್ಪ ಪುಟ್ಟು ರವರ ಅಭಿಮಾನಿಗಳು ಅಂಗನವಾಡಿ ಹಾಗೂ ಶಾಲೆಯ ಎಲ್ಲ ಮಕ್ಕಳಿಗೂ ಚಿಕ್ಕಮಾರಪ್ಪ ನೀರಿನ ಬಾಟಲ್ ವಿತರಿಸಿದರು.
ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಮಕ್ಕಳಿಗೆ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಬಶೆಟ್ಟಹಳ್ಳಿ ಹೋಬಳಿ ಮಟ್ಟದ ಕ್ರೀಡೆಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ಡಿ.ಸಂತೋಷ್ ಕುಮಾರ್, ವಿಶ್ವನಾಥ್, ಚಿಕ್ಕಮಾರಪ್ಪ, ಎ ಸುರೇಶ್,ಮಿಥುನ್,ಪ್ರಭಾಕರ್ ಡಿ,ರಮೇಶ್ ಟಿಎಂ, ಆಕಾಶ್, ಹುಸೇನ್(ಚೋಟಾ),ಶಿಕ್ಷಕರಾದ,ಹರೀಶ್,ನಾಗೇಶ್,ಶಿವಲೀಲಾ,ಅಮರನಾಥ್ ಪೋಷಕರು ಹಾಗೂ ಹಳೆಯ ವಿದ್ಯಾರ್ಥಿಗಳು ಇದ್ದರು.

Leave a Reply

Your email address will not be published. Required fields are marked *

error: Content is protected !!