ಉದಯವಾಹಿನಿ, ಜೇವರ್ಗಿ: ಪಟ್ಟಣದ ಹಳೇ ತಹಸಿಲ್ದಾರ್ ಕಚೇರಿ ಆವರಣದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಜಯಂತೋತ್ಸವ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಶಿವರಾಜ್ ಪಾಟೀಲ್ ರದ್ದೇವಡಗಿ ಮಾತನಾಡಿದರು. ದೇಶಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ಮಹಾನ್ ಪರಾಕ್ರಮಿ ರಾಯಣ್ಣ ಹುಟ್ಟಿದ ದಿನ ಸ್ವಾತಂತ್ರ ದಿನಾಚರಣೆಯಾಗಿ ಆಚರಿಸುತ್ತೇವೆ. ವೀರ ಮರಣ ಹೊಂದಿದ ದಿನವನ್ನು ನಾವು ಗಣರಾಜ್ಯೋತ್ಸವವನ್ನು ಆಚರಣೆ ಮಾಡುತ್ತೇವೆ. ಇಂತಹ ಮಹಾನ್ ಪುರುಷನನ್ನು ಪಡೆದ ಭಾರತಮಾತೆ ಧನ್ಯ ಎಂದರು. ಸಂಗೊಳ್ಳಿ ರಾಯಣ್ಣನ ದೇಶಭಕ್ತಿ ಇಂದಿನ ಯುವಕರು ತಮ್ಮ ಜೀವನದಲ್ಲಿ ರೂಡಿಸಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕುರಿ&ಉಣ್ಣಿ ನಿಗಮ ಮಂಡಳಿಯ ಮಾಜಿ ಅಧ್ಯಕ್ಷರಾದ ಧರ್ಮಣ್ಣ ದೊಡ್ಮನಿ, ಶ್ರೀಮತಿ ಶೋಭಾ ಬಾಣಿ, ಶಂಕರಲಿಂಗ ಕರ್ಕಿಹಳ್ಳಿ, ರೇವಣಸಿದ್ದಪ್ಪ ಸಂಕಾಲಿ, ನಿಂಗಣ್ಣ ರದ್ದೇವಡಗಿ, ಸಂಗೊಳ್ಳಿ ರಾಯಣ್ಣ ಅಭಿಮಾನಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!