ಉದಯವಾಹಿನಿ, ದೇವರಹಿಪ್ಪರಗಿ: ಪಟ್ಟಣದಿಂದ ತಾಲೂಕಿನ ಯಲಗೋಡ ಗ್ರಾಮಕ್ಕೆ ನೂತನ ಬಸ್ ಸಂಚಾರ ಮಂಗಳವಾರದಿಂದ ಆರಂಭವಾಗಿದೆ ಗ್ರಾಮಸ್ಥರಲ್ಲಿ ಹರ್ಷ.
ಗ್ರಾಮದ ಹಿರೇಮಠ ಶ್ರೀಗಳಿಂದ ನೂತನ ಬಸ್ ಗೆ ಪೂಜೆ ಸಲ್ಲಿಸುವ ಮೂಲಕ ಪ್ರಯಾಣಕ್ಕೆ ಶುಭ ಕೋರಿದರು.
ನಂತರ ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷರಾದ ಸಾಯಿಬಣ್ಣ ಬಾಗೇವಾಡಿ ಮಾತನಾಡಿ ನೂತನ ತಾಲೂಕು ದೇವರಹಿಪ್ಪರಗಿಗೆ ಹೋಗಲು ಈವರೆಗೂ ಬಸ್ಸು ಸಂಚಾರ ಇರದೇ ಯಲಗೋಡ ಗ್ರಾಮಸ್ಥರು ಪರದಾಡುವ ಸ್ಥಿತಿ ಇತ್ತು.ಶಾಸಕರಾದ ರಾಜುಗೌಡ ಪಾಟೀಲ ಕುದುರಿಸಾಲವಾಡಗಿ ಅವರ ಸೂಚನೆಯಂತೆ ಸಿಂದಗಿ ಸಾರಿಗೆ ಘಟಕ ಅಧಿಕಾರಿಗಳು ನೂತನ ಬಸ್ ಸಂಚಾರ ಆರಂಭಿಸಿರುವುದು ಗ್ರಾಮಸ್ಥರಲ್ಲಿ ಸಂತಸ ತಂದಿದೆ ಇದರ ಸದುಪಯೋಗ ಗ್ರಾಮಸ್ಥರು ಪಡೆದುಕೊಳ್ಳಬೇಕು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಜಿಲ್ಲಾ ಉಪಾಧ್ಯಕ್ಷರಾದ ಮಶ್ಯಾಕಸಾಬ ಚೌದರಿ ಸೇರಿದಂತೆ ಗ್ರಾಮದ ಪ್ರಮುಖರು ಗಣ್ಯರು ಜೆಡಿಎಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
