ಉದವಾಹಿನಿ, ಗುರುಗ್ರಾಮ: ಹರಿಯಾಣದ ನುಹ್ ನಲ್ಲಿ ನಡೆದ ಪ್ರಚೋದನಕಾರಿ ವೀಡಿಯೊ ಆರೋಪದಡಿ ಜಾಮೀನಿನ ಮೇಲೆ ಹೊರಗಿರುವ ಬಜರಂಗದಳದ ಸದಸ್ಯ ಮತ್ತು ಗೋರಕ್ಷಕ ಬಿಟ್ಟು ಬಜರಂಗಿ ಅವರನ್ನು ಮತ್ತೆ ಬಂಧಿಸಲಾಗಿದೆ,ಈ ಬಾರಿ ಗಲಭೆ ಮತ್ತು ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ದ ಆರೋಪದಲ್ಲಿ ನುಹ್ ಪೊಲೀಸರು ಈ ಬಾರಿ ಬಂಧಿಸಿದ್ದಾರೆ ಎಂದು ತಿಳಿಸಿದ್ದಾರೆ.
ಫರಿದಾಬಾದ್‌ನಲ್ಲಿರುವ ಅವರ ಮನೆಯಿಂದ ನುಹ್ ಪೊಲೀಸರ ತಂಡ ಮಫ್ತಿಯಲ್ಲಿ ತೆರಳಿ ಬಿಟ್ಟು ಭಜರಂಗಿಯನ್ನು ಬಂಧಿಸಲಾಗಿದೆ ಎಂದು ಎಎಸ್ಪಿ ಉಷಾ ಕುಂದು ತಿಳಿಸಿದ್ದಾರೆ.
ನುಹ್ ಘರ್ಷಣೆಯ ದಿನದಂದು ಪೋಸ್ಟ್ ಮಾಡಿದ ವೀಡಿಯೊದಲ್ಲಿ ಬಜರಂಗದಳದ ವ್ಯಕ್ತಿ ಬಂಧನ ಮಾಡಲಾಗಿತ್ತು. ಆ ನಂತರ ಜಾಮೀನು ಮೇಲೆ ಬಿಟ್ಟು ಭಜರಂಗಿ ಅವರನ್ನು ಬಂಧಿಸಲಾಗಿತ್ತು. ಸುದ್ದಿ ಸಂಸ್ಥೆಗಳು ಪೋಸ್ಟ್ ಮಾಡಿದ ಸಿಸಿಟಿವಿ ಫೂಟೇಜ್ ಸಹ ಬಂದೂಕುಗಳೊಂದಿಗೆ ಶಸ್ತ್ರಸಜ್ಜಿತವಾದ ಪುರುಷರ ಗುಂಪು ಮತ್ತು ಲಾಠಿ ತೋರಿಸಿದೆ . ಸ್ಥಳೀಯರು ನೋಡುತ್ತಿದ್ದಂತೆಯೇ ಪೊಲೀಸ್ ತಂಡ ಮನೆಯತ್ತ ಧಾವಿಸಿ ಬಂಧಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!