ಉದಯವಾಹಿನಿ,ಜಕಾರ್ತ : ಒಂದೆಡೆ ಹವಾಮಾನ ವೈಪರಿತ್ಯದ ಪರಿಣಾಮ ಜನತೆ ವಿಶ್ವದೆಲ್ಲೆಡೆ ಜನತೆ ಸಂಕಷ್ಟಕ್ಕೆ ಸಿಲುಕಿದ್ದರೆ ಮತ್ತೊಂದು ಇದೀಗ ವಾಯುಮಾಲಿನ್ಯದ ಪರಿಣಾಮ ಜೀವ ಸಂಕುಲದ ಜೀವಕ್ಕೆ ಎರವಾಗಿದೆ. ಅದರಲ್ಲೂ ಇಂಡೋನೇಶ್ಯಾದ ಜಕಾರ್ತದಲ್ಲಿ ವಾಯುಮಾಲಿನ್ಯ ಪ್ರಮಾಣ ತೀವ್ರಗೊಂಡಿದ್ದು, ಉದ್ಯೋಗಿಗಳು ಕಚೇರಿಗೆ ತೆರಳದಂತೆ ಹಾಗೂ ಮನೆಯಿಂದಲೇ ಕೆಲಸ ನಿರ್ವಹಿಸುವಂತೆ ಅಲ್ಲಿನ ಅಧ್ಯಕ್ಷ ಜೊಕೊ ವಿಡೊಡೊ ಸೂಚಿಸಿದ್ದಾರೆ.
ವಿಶ್ವದ ಕಲುಷಿತ ನಗರಗಳ ಪೈಕಿ ಸದ್ಯ ಜಕಾರ್ತ ಹೆಸರು ಕೂಡ ಇದ್ದು, ಸದ್ಯ ಇಲ್ಲಿನ ವಿಷಮ ಪರಿಸ್ಥಿತಿ ಮತ್ತಷ್ಟು ತೀವ್ರಗೊಂಡಿದೆ. ಒಂದೆಡೆ ಭಾರತದ ದೆಹಲಿಯಲ್ಲಿ ವಾಯುಮಾಲಿನ್ಯದ ಪರಿಣಾಮ ಜನತೆ ಸಂಕಷ್ಟಕ್ಕೆ ಸಿಲುಕಿ ಸದ್ಯದ ಮಟ್ಟಿಗೆ ಪರಿಸ್ಥಿತಿ ಕೊಂಚ ಸುಧಾರಿಸಿದರೆ ಅತ್ತ ಮತ್ತೊಂದೆಡೆ ತೀವ್ರವಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಒಂದಾದ ಇಂಡೋನೇಶ್ಯಾ ಜಕಾರ್ತದಲ್ಲಿ ಪರಿಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಕೆಲ ದಿನಗಳ ಹಿಂದೆ ಪ್ರಕಟಗೊಂಡ ಸ್ವಿಸ್ ವಾಯು ಗುಣಮಟ್ಟದ ತಂತ್ರಜ್ಞಾನ ಕಂಪನಿ ಐಕ್ಯುಏರ್‌ನ ನೇರ ಮಾಹಿತಿಯ ಪ್ರಕಾರ, ವಿಶ್ವದ ಮಲಿನಯುಕ್ತ ನಗರಗಳಲ್ಲಿ ಜಕಾರ್ತ ಪ್ರಮುಖ ಸ್ಥಾನ ಪಡೆದುಕೊಂಡಿದೆ. ರಿಯಾದ್, ದೋಹಾ ಹಾಗೂ ಕರಾಚಿ ಕೂಡ ತೀವ್ರ ವಾಯುಮಾಲಿನ್ಯಕಾರಿ ನಗರಗಳಲ್ಲಿ ಸ್ಥಾನ ಪಡೆದುಕೊಂಡಿದೆ.
