ಉದಯವಾಹಿನಿ, ಲಂಡನ್, : “ಭಾರತೀಯ ಸ್ವಾತಂತ್ರ್ಯ ದಿನದಂದು ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ಮೊರಾರಿ ಬಾಪು ಅವರ ರಾಮ್ ಕಥಾದಲ್ಲಿ ಭಾಗವಹಿಸಿದ್ದುದು ಖುಷಿಕೊಟ್ಟಿದೆ ಎಂದು ಇಂಗ್ಲೆಂಡ್ ಪ್ರಧಾನಿ ರಿಷಿ ಸುನಕ್ ಹೇಳಿದ್ದಾರೆ.
ಇಂಗ್ಲೆಂಡ್ ಪ್ರಧಾನಿಯಾಗಿ ಭಾಗವಹಿಸಿರುವುದಕ್ಕಿಂತ ಹೆಚ್ಚಾಗಿ ಒಬ್ಬ ಹಿಂದೂ ಆಗಿ ಭಾರತೀಯ ಸ್ವಾತಂತ್ರ್ಯ ದಿನಾಚಾರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆ ಎಂದು ತಿಳಿಸಿದ್ದಾರೆ.
ರಿಷಿ ಸುನಕ್ ಸೌತಾಂಪ್ಟನ್‌ನಲ್ಲಿ ಹುಟ್ಟಿ ಬೆಳೆದೂ ಅವರನ್ನು ಭಾರತೀಯರು ತಮ್ಮ ಮಣ್ಣಿನ ಮಗನೆಂದು ಪರಿಗಣಿಸುತ್ತಾರೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ರಿಷಿ ಸುನಕ್ ಸ್ವಾಂತತ್ರೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ
ಈ ಕುರಿತು ಮಾತನಾಡಿದ ಪ್ರಧಾನಿ ರಿಷಿ ಸುನಕ್ ಅವರು ಭಾರತೀಯ ಸ್ವಾತಂತ್ರೋತ್ಸ ದಿನದಲ್ಲಿ ಇಲ್ಲಿಗೆ ಬಂದಿರುವುದು ನಿಜವಾಗಿಯೂ ಗೌರವ ಮತ್ತು ಸಂತೋಷವಾಗಿದೆ ಎಂದಿದ್ದಾರೆ.
ಇದು ಸುಲಭದ ಕೆಲಸವಲ್ಲ. ಮಾಡಲು ಕಠಿಣ ನಿರ್ಧಾರಗಳಿವೆ, ಎದುರಿಸಲು ಕಠಿಣ ಆಯ್ಕೆಗಳಿವೆ. ನಮ್ಮ ದೇಶಕ್ಕಾಗಿ ನಾನು ಮಾಡಬಹುದಾದ ಅತ್ಯುತ್ತಮವಾದುದನ್ನು ಮಾಡಲು ನನಗೆ ಧೈರ್ಯ, ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.
