
ಉದಯವಾಹಿನಿ, ಬೀದರ್ :ಮಹಾತ್ಮಗಾಂಧೀಜಿ ಸೇರಿದಂತೆ ಹಲವಾರು ಮಹಾತ್ಮರ ನಾಯಕರ ನೇತೃತ್ವದಲ್ಲಿ ಹೋರಾಟ, ಅಹಿಂಸಾತ್ಮಕ ಚಳುವಳಿ ನಡೆಸುವ ಮೂಲಕ ಬ್ರಿಟಿಷರ ಕಪಿ ಮುಷ್ಟಿಯಲ್ಲಿದ್ದ ಭಾರತವನ್ನು ಸ್ವಾತಂತ್ರ್ಯಗೊಳಿಸುವಲ್ಲಿ ಯಶಸ್ವಿಯಾಯಿತು. ಸ್ವಾತಂತ್ರ್ಯಕ್ಕಾಗಿ ಹಲವಾರು ನಾಯಕರು ಬಲಿದಾನ ನೀಡಿದ್ದಾರೆ ಎಂದು ಲಾಲ್ ಬಹದ್ದೂರ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ರತಿಕಾಂತ್ ಮಜಗೆ ಹೇಳಿದರು. ನಗರದ ಲಾಲ್ ಬಹದ್ದೂರ್ ಶಿಕ್ಷಣ ಸಂಸ್ಥೆಯ ವತಿಯಿಂದ ನಡೆದ 77ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಶ್ರಮಿಸಿದ ದೇಶದ ಮಹಾನ್ ನಾಯಕರ ಸ್ಮರಣೆ ಮಾಡುವದಲ್ಲದೆ, ಮಕ್ಕಳಿಗೆ ದಿನ ನಿತ್ಯ ಸ್ವಾತಂತ್ರ್ಯ ದೊರೆಯಲು ಹೋರಾಡಿದ ತಮ್ಮ ಜೀವನವನ್ನೆ ಮುಡಿಪಿಟ್ಟ ಮಹಾತ್ಮರ ಕುರಿತು ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು ಎಂದರು.ಕಾರ್ಯ ನಿರ್ವಹಣಾಧಿಕಾರಿ ವಿಶ್ವನಾಥ್ ಸ್ವಾಮಿ ಕೊಳ್ಳೂರ ಮಾತನಾಡಿ, ಸ್ವಾತಂತ್ರ್ಯ ದಿನಾಚರಣೆ ದೇಶದ ಬಹಳ ದೂಡ್ಡ ಹಬ್ಬವಾಗಿದೆ ಇದು ನಮ್ಮೆಲ್ಲರ ಪಾಲಿಗೆ ಸುದೈವ ಎಂದು ಹೇಳಿದರು. ಈ ಸಂದರ್ಭದಲ್ಲಿ ವಿಜಯಕುಮಾರ್ ರಾಗಾ, ಶ್ರೀಮಂತ ಕೆದೊಡ್ಡಿ, ಅಮರ ಬಿರಾದಾರ, ಗುರುಚರಣ, ಅಶೋಕ ಪಾಂಚಾಳ, ಆನಂದ ಪೌಲ್, ಭಾಗ್ಯಲಕ್ಷ್ಮಿ, ಮಹಾದೇವಿ ವಾರಿಕ್, ಸವಿತಾ, ಭಾರತಿ, ಅನುರಾಧ ಇತರರು ಇದ್ದರು.
