ಉದಯವಾಹಿನಿ, ದೇವದುರ್ಗ: ತಾಲೂಕಿನ ದಕ್ಷಿಣ ವಲಯದ ಗುಡೇಲರದೊಡ್ಡಿ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತವಾಗಿ ಮೊದಲ ಬಾರಿಗೆ ಎಸ್‌ಡಿಎಂಸಿ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀ ಹನುಮಂತರಾಯ ಧ್ವಜಾರೋಹಣ ಮಾಡುವ ಮೂಲಕ ಹಾಗೂ ಶಾಲೆಯ ಮುಖ್ಯ ಗುರುಗಳಾದ ಶ್ರೀ ಗುರುಸ್ವಾಮಿ ಅವರು ಸ್ವಾತಂತ್ರ್ಯದ ಕುರಿತು ಭಾಷಣವನ್ನು ಮಾಡಿದರು. ಅತಿಥಿ ಶಿಕ್ಷಕರಾದ ಕರಿಯಪ್ಪ ಭಂಡಾರಿ ಅವರು ಸ್ವಾಗತಿಸಿ ಎಲ್ಲಾ ಮಕ್ಕಳಿಗೆ ಊರಿನ ಹಿರಿಯರಿಗೆ ಸಿಹಿಯನ್ನು ಹಂಚುವುದರ ಮುಖಾಂತರವಾಗಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದ್ದರು. ಈ ಸಮಯದಲ್ಲಿ ಅಡಿಗೆ ಸಿಬ್ಬಂದಿ ವರ್ಗದವರು ಅಂಗನವಾಡಿ ಕಾರ್ಯಕರ್ತರು ಹಾಗೂ ಶಾಲೆಯ ಮುದ್ದು ಮಕ್ಕಳು ಭಾಗವಹಿಸಿದ್ದರು.
