
ಉದಯವಾಹಿನಿ ಕುಶಾಲನಗರ:-ದೇಶದ ಅಭಿವೃದ್ಧಿಯಲ್ಲಿ ಯುವ ಜನಾಂಗದ ಪಾತ್ರ ಮಹತ್ವದಾಗಿದೆ ಎಂದು ತಹಸಿಲ್ದಾರ್ ಟಿ.ಎಂ ಪ್ರಕಾಶ್ ಇಂದಿಲ್ಲಿ ಹೇಳಿದರು.
ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಕುಶಾಲನಗರ ಇವರ ವತಿಯಿಂದ ಕುಶಾಲ್ನಗರದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಮೈದಾನದಲ್ಲಿ ಆಯೋಜಿಸಲಾಗಿದ್ದ 77ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಸಂದೇಶ ನೀಡಿದರು ಮುಂದುವರಿದು ಮಾತನಾಡಿದ ಇವರು ಸ್ವಾತಂತ್ರ ಹೋರಾಟಗಾರರು ಹಾಗೂ ಹಿರಿಯರ ತ್ಯಾಗ ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ ಬಂದಿದ್ದು ಇಂತಹ ಸ್ವಾತಂತ್ರ್ಯವನ್ನು ಅರ್ಥಪೂರ್ಣವಾಗಿ ಉಳಿಸಿಕೊಂಡು ಹೋಗಬೇಕಾಗಿರುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು. ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಬಿಜಿವಿ ಕುಮಾರ್ ಮಾತನಾಡಿ ಪ್ರತಿಯೊಬ್ಬ ಯುವಕರು ದೇಶಪ್ರೇಮವನ್ನು ಮೈಗೂಡಿಸಿಕೊಳ್ಳಬೇಕು ಜಾತಿ ಮತ ಭೇದವಿಲ್ಲದೆ ಭಾರತಾಂಬೆಯನ್ನು ಪೂಜಿಸುವ ಮೂಲಕ ಗೌರವ ಸಲ್ಲಿಸಬೇಕು ಎಂದರು.
ಡಿವೈಎಸ್ಪಿ ಎಂ ವಿ ಗಂಗಾಧರ್ ಮಾತನಾಡಿದರು ಪೊಲೀಸ ವೃತ್ತ ನಿರೀಕ್ಷಕ ಮಹೇಶ್ ಪುರಸಭೆಯ ಮುಖ್ಯ ಅಧಿಕಾರಿ ಕೃಷ್ಣ ಪ್ರಸಾದ್ ಎಪಿಸಿಎಂಎಸ್‌ಸಿ ಅಧ್ಯಕ್ಷ ಎಂ ಎನ್ ಕುಮಾರ್ ಉಪಾಧ್ಯಕ್ಷ ದೊಡ್ಡಯ್ಯ ಉಪತಹಸಿಲ್ದಾರ್ ಮಧುಸೂದನ್ ತೋಟಗಾರಿಕಾ ಸಹಾಯಕ ನಿರ್ದೇಶಕ ವರದರಾಜ್ ತಾಲೂಕು ಕಸಾಪ ಅಧ್ಯಕ್ಷ ಕೆ ಎಸ್ ನಾಗೇಶ್ ಇದ್ದರು. ಸ್ವತಂತ್ರ ದಿನದ ಅಂಗವಾಗಿ ಪೋಲಿಸ್ ಇಲಾಖೆ ಪಾಲಿಟೆಕ್ನಿಕ್ ಕಾಲೇಜಿನ ನ್‌ಸಿಸಿ ಘಟಕ ಸೇರಿದಂತೆ ವಿವಿಧ ಕಾಲೇಜುಗಳ 12 ಆಕರ್ಷಕ ಪಥ ಸಂಚಲನ ನಡೆಯಿತು.ತಹಸಿಲ್ದಾರ್ ಪ್ರಕಾಶ್ ತೆರೆದ ಜಿಪಿ ನಲ್ಲಿ ತೆರಳಿ ಪತಸಂಚಲನ ವೀಕ್ಷಣೆ ಮಾಡಿ ಗೌರವ ವಂದನೆ ಸ್ವೀಕರಿಸಿದರು ವೇದಿಕೆಯಲ್ಲಿ ಮುಖ್ಯ ಶಿಕ್ಷಕಿ ಪುಷ್ಪ ಶಿಕ್ಷಕಿ ಹೇಮಲತಾ ಮಹೇಶ್ ಆಮಿನ್ ದೈಹಿಕ ಶಿಕ್ಷಕರಾದ ಚಂದ್ರವತಿ ಉತ್ತಪ್ಪ ಭಾರತಿ ಇದ್ದರು
