ಉದಯವಾಹಿನಿ,ತಾಳಿಕೋಟಿ: ದೇಶದ ಸ್ವಾತಂತ್ರ್ಯಕ್ಕಾಗಿ ಎಲ್ಲವನ್ನು ತ್ಯಾಗ ಮಾಡಿದ ಮಹಾನುಭಾವರನ್ನು ಸ್ಮರಿಸುವುದಕ್ಕಾಗಿಯೇ ಪ್ರತಿವರ್ಷ ಆಗಸ್ಟ್ 15ರಂದು ಸ್ವಾತಂತ್ರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಯಾರು ದೇಶ ಹಾಗೂ ಸಮಾಜಕ್ಕಾಗಿ ತ್ಯಾಗ ಮಾಡುತ್ತಾರೆ ಅವರು ಇತಿಹಾಸದಲ್ಲಿ ಸದಾ ಅಮರವಾಗಿರುತ್ತಾರೆ ಎಂದು ಮುಖಂಡ ಡಾ. ಬಸವರಾಜ ಅಸ್ಕಿ ಹೇಳಿದರು. 77ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಕೊಣ್ಣೂರ ಗ್ರಾಮದಲ್ಲಿ ಶ್ರೀ ಬಲವಂತರಾಯ ಹಡಲಗೇರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಬದುಕಿನಲ್ಲಿ ನಾವು ಸದಾ ಕೃತಜ್ಞವಂತರಾಗಬೇಕು ನಮ್ಮನ್ನು ಹೆತ್ತ ತಂದೆ ತಾಯಿಗಳಿಗೆ ವಿದ್ಯಾದಾನ ಮಾಡಿದ ಗುರುವಿಗೆ ನಾವು ಬದುಕುತ್ತಿರುವ ಈ ಪುಣ್ಯಭೂಮಿಗೆ ಸದಾ ಸ್ಮರಿಸುವಂಥವರಾಗಬೇಕು. ಈ ಶಿಕ್ಷಣ ಸಂಸ್ಥೆ ಕಟ್ಟಿ ಬೆಳೆಸಲು ದಿವಂಗತ ಬಿ ಎಸ್ ಪಾಟೀಲರ ಕೊಡುಗೆ ಅಪಾರವಾಗಿದೆ ಅದನ್ನು ನಾವೆಂದು ಮರೆಯಬಾರದು. ಈ ಸಂಸ್ಥೆಯಲ್ಲಿ ಕಲಿಯುತ್ತಿರುವ ಮಕ್ಕಳು ನೈತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಇದರಿಂದಲೇ ದೇಶದ ಪ್ರಗತಿ ಹಾಗೂ ಉನ್ನತಿ ಆಗಲು ಸಾಧ್ಯ ಎಂದರು. ಗಣ್ಯರಾದ ಸಿದ್ದನಗೌಡ ಅಡಲ್ಗೇರಿ ಅವರು ಧ್ವಜಾರೋಹಣ ನೆರವೇರಿಸಿದರು. ಸಾನಿಧ್ಯವನ್ನು ಪರಮಪೂಜ್ಯ ಶ್ರೀ ಶ್ರೀನಾಥ್ ಸ್ವಾಮಿಗಳು ವಹಿಸಿದ್ದರು ಗಣ್ಯರಾದ ಸೋಮನಾಥ ಯಾಳವಾರ ಸಿದ್ದನಗೌಡ ಪಾಟೀಲ್ ಚಿಂತಪ್ಪ ಗೌಡ ಪಾಟೀಲ್ ರಾಮನಗೌಡ ಇಂಗಳಗಿ ಬಸನಗೌಡ ತಾಳಿಕೋಟಿ ಸಿದ್ದಪ್ಪ ಹೊಸಮನಿ, ಸೋಮನಗೌಡ ಬಿರಾದರ ಇದ್ದರು.

Leave a Reply

Your email address will not be published. Required fields are marked *

error: Content is protected !!