
ಉದಯವಾಹಿನಿ,ದೇವದುರ್ಗ : ಕನ್ನಡ ಸಾಹಿತ್ಯ ಪರಿಷತ್‌ನಿಂದ ಆಯೋಜಿಸುವ ದತ್ತಿ ನಿಧಿ ಕಾರ್ಯಕ್ರಮದಲ್ಲಿ ದೇವದುರ್ಗ ಪುರಸಭೆ ಮುಖ್ಯಧಿಕಾರಿ ಕೆ ಹಂಪಯ್ಯ ರವರಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ರಾಯಚೂರು ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ರಂಗಣ್ಣ ಪಾಟೀಲ್ ಅಳ್ಳುoಡಿ, ಹಾಗೂ ಕ ಸಾ ಪ ತಾಲೂಕು ಅಧ್ಯಕ್ಷ ಎಚ್. ಶಿವರಾಜ, ವೆಂಕಟೇಶ್ ನಿಲೋಗಲ್, ಮೊಯಿನುದ್ದಿನ್ ಕಾಟಮಳ್ಳಿ, ರಾಮಣ್ಣ ನಾಯಕ, ಹಾಗೂ ಸಂಘ ಸಂಸ್ಥೆಯ ಮುಖಂಡರು ಉಪಸ್ಥಿತರಿದ್ದರು…
