
ಉದಯವಾಹಿನಿ,ಸಿಂಧನೂರು :ತಾಲ್ಲೂಕಿನ ರಾಮರೆಡ್ಡಿ ಕ್ಯಾಂಪ್ ನಲ್ಲಿ ವಾಸವಾಗಿರುವ ಭೀಮಾಶಂಕರ ನಾಯಕ್ ನಗರದ ಅನೀಕೆತನ ಪದವಿ ಮಹಾವಿದ್ಯಾಲಯದಲ್ಲಿ ಬಿಎ ಪದವಿ ವ್ಯಾಸಂಗ ಮಾಡುತ್ತಿರುವ ಭೀಮಾಶಂಕರ ನಾಯಕ್ ನಿನ್ನೆ ಮಂಗಳವಾರ ದಿನವೆಂದು ಕಾಲೇಜು ಗೆ ಬಂದು ಸ್ವಾತಂತ್ರೋತ್ಸವ ಧ್ವಜಾರೋಹಣ ಮುಗಿಸಿಕೊಂಡು ಸ್ವಗ್ರಾಮ ರಾಮರೆಡ್ಡಿ ಕ್ಯಾಂಪ್ ತೆರಳಿದ್ದಾನೆಸಂಜೆ ಗ್ರಾಮದಲ್ಲಿ ವಿದ್ಯುತ್ ದೀಪದ ಸಮಸ್ಯೆ ಯಾಗಿದ್ದರಿಂದ ಭೂತದಿನ್ನಿ ಗ್ರಾಮ ಪಂಚಾಯಿತಿ ಸದಸ್ಯೆಯಾಗಿರವ ಶ್ರೀ ಮತಿ ಹುಲಿಗೆಮ್ಮನವರ ತಮ್ಮನಾದ ಮೌನೇಶ್ ಎಂಬ ವ್ಯಕ್ತಿಯ ಭೀಮಾಶಂಕರ ನಾಯಕನನ್ನು ಒತ್ತಾಯ ಮಾಡಿ ವಿದ್ಯುತ್ ಕಂಬದ ಮೇಲೆ ಏರಿಸಿ ಸರಿಪಡಿಸು ಎಂದು ಮೌನೇಶ್ ಹೇಳಿದ್ದು ಆಗ ಭೀಮಾಶಂಕರ ಕಂಬದ ಮೇಲೆ ಏರಿ ವಿದ್ಯುತ್ ದೀಪದ (ಬಲ್ಪ್) ನ್ನು ಅಳವಡಿಸುವ ಸಂದರ್ಭದಲ್ಲಿ ವಿದ್ಯುತ್ ಸ್ಪರ್ಶದಿಂದ ಸ್ಥಳದಲ್ಲಿ ಮೃತಪಟ್ಟಿದ್ದಾನೆ ತದನಂತರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ನಗರದ ಸರ್ಕಾರಿ ಆಸ್ಪತ್ರೆಗೆ ಕರೆತರಲಾಯಿತು ಪರೀಕ್ಷೆ ನಡೆಯುವ ಸಂದರ್ಭದಲ್ಲಿ ಕುಟುಂಬಸ್ಥರು ಕೈಗೆ ಬಂದ ಮಗನನ್ನು ಕಳೆದುಕೊಂಡ ಆಕ್ರಂದನ ಮುಗಿಲು ಮುಟ್ಟಿತ್ತುಗೆಳೆಯನ ಸಾವು ವಿಷಯ ತಿಳಿದ ಅನಿಕೇತನ ಕಾಲೇಜುನ ಲಚ್ಚರ್ಸ್ ಹಾಗೂ ನೂರಾರು ವಿದ್ಯಾರ್ಥಿಗಳು ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಗೆಳೆಯನ ಸಾವು ಕಂಡು ಎಲ್ಲರೂ ಮುಖದಲ್ಲಿ ದುಃಖ ನಮನದೊಂದಿಗೆ ಕಣ್ಣೀರು ಹರಿದು ಬಂದವು. ಗ್ರಾಮ ಪಂಚಾಯತಿ ಹಾಗೂ ಕೆಇಬಿ ಆಫೀಸ್ ವಿರುದ್ಧ ಕೌಶಲ್ಯ ಆಕ್ರೋಶವನ್ನು ವ್ಯಕ್ತಪಡಿಸಿದರು ನಮ್ಮ ಗೆಳೆಯನ ಸಾವು ಗೆ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಹಾಗೂ ಕೆಇಬಿ ಆಫೀಸ್ ಅಧಿಕಾರಿಗಳೇ ನಿರ್ಲಕ್ಷ್ಯ ಧೋರಣೆ ತೋರಿ ಭೀಮಾಶಂಕರ ನಾಯಕ್ ಸಾವು ಗೆ ನೇರ ಹೊಣೆಗಾರರು ಎಂದರು ಕುಟುಂಬಕ್ಕೆ ಪರಿಹಾರ ನೀಡುವಂತೆ ಒತ್ತಾಯಿಸಿದರು.
