ಉದಯವಾಹಿನಿ, ಸಿಂಧನೂರು: ಉದ್ಯೋಗ ಕೂಲಿಕಾರರು ತಾವೆಲ್ಲ ತರಬೇತಿ ಪಡೆದು ಸ್ವಯಂ ಉದ್ಯೋಗಿಗಳಾಗಿ ಎಂದು ಹೇಳಿದರು.

ತಾಲ್ಲೂಕಿನ ಸಾಲಗುಂದ ಹೋಬಳಿಯಲ್ಲಿ ನಡೆದ ನಿರುದ್ಯೋಗವನ್ನು ಹೋಗಲಾಡಿಸಲು ಸರಕಾರ ಗ್ರಾಮೀಣ ಪ್ರದೇಶಗಳಲ್ಲಿ ನರೇಗಾ ಕೂಲಿಕಾರರು ನೂರು ದಿನ ಮಾನವ ದಿನಗಳನ್ನು ಮುಗಿಸಿದವರಿಗೆ ಉದ್ಯೋಗ ತರಬೇತಿ ಕಾರ್ಯಕ್ರಮಕ್ಕೆ ಭಾಗವಹಿಸಿ ನಂತರ ಉದ್ಘಾಟನೆ ಮಾಡಿ ಮಾತನಾಡಿದ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ್ ಅವರ ಕೇಂದ್ರ ಮತ್ತು ರಾಜ್ಯ ಸರ್ಕಾರ ಜನರು ಗುಳ್ಳೆ ಹೋಗಬಾರದೆಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನರೇಗಾ ಯೋಜನೆ ಸೇರಿದಂತೆ ಇತರರು ಯೋಜನೆಗಳು ಅನುಷ್ಠಾನಕ್ಕೆ ತಂದು ಸಾವಿರಾರು ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದ್ದು ಅದರ ಲಾಭವನ್ನು ತಾವೆಲ್ಲಾ ಉದ್ಯೋಗ ತರಬೇತಿಯನ್ನು ಪಡೆದು ಸ್ವಯಂ ಉದ್ಯೋಗಿಗಳಾಗಿ ಎಂದರು. 

ನಮ್ಮ ನೀರಾವರಿ ಪ್ರದೇಶದ ಭಾಗದಲ್ಲಿ ಹೈನುಗಾರಿಕೆ ಹೆಚ್ಚಿದ್ದು ಹಸುಗಳಿಗೆ ಯಾವ ಫುಡ್ ನೀಡಬೇಕು ಯಾವ ಮೇವನ್ನು ಹಸುಗಳಿಗಿಗೆ ತಿನಿಸಬೇಕು ನೀವು ಯಾವ ಹಸುಗಳನ್ನು ಸಾಕುಬೇಕು ಮತ್ತು ಎರೆ ಹುಳಗಳ ಸಾಕಾಣಿಕೆ ಬಗ್ಗೆ ತರಬೇತಿಯನ್ನು ಹತ್ತು ದಿನಗಳ ಕಾಲ ರಾಯಚೂರು ಎಸ್. ಬಿ. ಐ. ಆರ್ ಸೆಟ್ ರವರು ತರಬೇತಿಯನ್ನು ನೀಡುತ್ತಾರೆ ತಾವುಗಳು ಸದಪಯೋಗ ಪಡಿಸಿಕೊಳ್ಳಿ ಎಂದು ಹೇಳಿದರು 

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗುಲ್ಜರ್ ಬೇಗಂ ವಹಿಸಿದರು ಮುಖ್ಯ ಅತಿಥಿಯಾಗಿ ನರೇಗಾ ಸಹಾಯಕ ನಿರ್ದೇಶಕರು ಆಲಂ ಭಾಷ ಮುಖ್ಯ ತರಬೇತಿದಾರ ವಿಜಯಕುಮಾರ್ ಬಡಿಗೇರ್,
ಜಿಲ್ಲಾ ವ್ಯವಸ್ಥಾಪಕ ಶ್ರೀ ಕಾಂತ ಬನ್ನಿಗೋಳ, ಐ ಇ ಸಿ ಸಂಯೋಜಕರು ಥಾಮಸ್,ಗ್ರಾಮ ಪಂಚಾಯತ್ ಅಧಿಕಾರಿ ವೀರಭದ್ರಪ್ಪ ಹಾಗೂ ಎನ್.ಆರ್. ಎಲ್ ಎಂ ಸಿಬ್ಬಂದಿಗಳು ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಉಪಸ್ಥಿತರಿದ್ದರು ಕಾರ್ಯಕ್ರಮವನ್ನು ರುದ್ರಯ್ಯ ಸ್ವಾಮಿ ನಿರೋಪಿಸಿದರು ಮಹಾಂತೇಶ್ ಭೇರಗಿ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!