
ಉದಯವಾಹಿನಿ, ಮುದ್ದೆಬಿಹಾಳ : 77ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಪಿಎಸೈ ಆರೀಪ್ ಮುಶಾಪೂರಿ ಧ್ವಜ ವಂದನೆ ಸಲ್ಲಿಸಿದರು.ಆರಕ್ಷಕರು, ಗೃಹ ರಕ್ಷಕ ದಳ, ಎನ್ ಎಸ್ ಎಸ್ , ಸ್ಕೌಟ್ಸ್ & ಗೈಡ್ಸ್ ಸೇರಿದಂತೆ ವಿವಿಧ ಪ್ರೌಢಶಾಲಾ ವಿದ್ಯಾರ್ಥಿಗಳು ಆಕರ್ಷಕ ಪಥಸಂಚಲನ ಮಾಡಿ ಧ್ವಜ ವಂದನೆ ಸಲ್ಲಿಸಿದರು .ಪಥಸಂಚಲನದಲ್ಲಿ ಪ್ರಥಮ ವಿಬಿಸಿ ಹೈಸ್ಕೂಲ್ ಶಾಲೆ, ದ್ವೀತಿಯ ಅಂಜುಮನ್ ಪ್ರೌಢಶಾಲೆ,ತೃತೀಯ ಆಕ್ಸ್‌ಫರ್ಡ್ ಪ್ರೌಢಶಾಲಾ ಸ್ಥಾನ ಪಡೆಯಿತು ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ; 77ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಲ್ಲಿ ಶಾಲಾ ವಿಧ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಸಂಭ್ರಮ ಇಮ್ಮಡಿಗೂಳಿಸಿದರು. ಪ್ರಾರ್ಥನಾ ಶಾಲೆ,ಕೆಬಿಎಂಪಿಎಸ್ ಶಾಲೆ,ಜ್ಞಾನ ಗಂಗೋತ್ರಿ ಶಾಲೆ,ಆಕ್ಸ್‌ಫರ್ಡ್ ಪಬ್ಲಿಕ್ ಸ್ಕೂಲ್, ಎಂ ಆರ್ ಎಂ ಶಾಲೆಯ ವಿದ್ಯಾರ್ಥಿಗಳು ದೇಶಭಕ್ತಿ ಗೀತೆಗಳಿಗೆ ನೃತ್ಯವನ್ನು ಮಾಡಿದರು ಈ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬಿ ಎಸ್ ಸೆಂಟ್ರಲ್ ಸ್ಕೂಲ್ ಪ್ರಥಮ, ಎಂಜಿಎಂಕೆ ದ್ವೀತಿಯ, ಚಿನ್ಮಯ ಜೆಸಿ ತೃತೀಯ ಸ್ಥಾನ ಪಡೆಯಿತು ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮದ ತೀರ್ಪುಗಾರರು ತಾರತಮ್ಯ ಮಾಡಿದ್ದಾರೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬೈಕ್ ವ್ಹಿಲಿಂಗ್ ಕುರಿತು, ಸೆಲ್ಪಿ ಅವಾಂತರದಿಂದ ಯುವ ಪಿಳಿಗೆ ಸಾವಿಗೀಡಾಗುತ್ತಿದ್ದಾರೆ ಎಂದು ಸಂದೇಶ ನೀಡಿದ ಮತ್ತು ಭಗತ್ ಸಿಂಗ್ ರ ದೇಶ ಪ್ರೇಮದ ಕುರಿತು ಸಂದೇಶ ನೀಡಿದ ಶಾಲೆಗೆ ಬಹುಮಾನ ನೀಡಬೇಕಿತ್ತು ತೀರ್ಪುಗಾರರು ಸರಿಯಾಗಿ ತೀರ್ಪು ನೀಡಿಲ್ಲವೆಂಬ ಅಸಮಾಧಾನವನ್ನು ಕರವೇ ಹೋರಾಟಗಾರ ರಾಜು ತುಂಬಗಿ ಮಾಧ್ಯಮಗಳ ಮುಂದೆ ವ್ಯಕ್ತಪಡಿಸಿದರು.
