ಉದಯವಾಹಿನಿ, ತಿರುಪತಿ:
ಮೂರು ದಿನಗಳ ಹಿಂದೆ ತಿರುಮಲ ದೇವಸ್ಥಾನಕ್ಕೆ ಹೋಗುವ ಅಲಿಪಿರಿ ಪಾದಚಾರಿ ಮಾರ್ಗದಲ್ಲಿ ಆರು ವರ್ಷದ ಬಾಲಕಿಯನ್ನು ಕೊಂದು ಹಾಕಿದ್ದ ಚಿರತೆ ಸೋಮವಾರ ಮುಂಜಾನೆ ಅರಣ್ಯ ಇಲಾಖೆ ಸಿಬ್ಬಂದಿಗೆ ಸಿಕ್ಕಿಬಿದ್ದಿತ್ತು.
ತಿರುಮಲ-ಅಲಿಪಿರಿ ಪಾದಚಾರಿ ಮಾರ್ಗದ ಸುತ್ತಮುತ್ತ ಇನ್ನೂ ಐದು ಚಿರತೆಗಳು ಕಾಣಿಸಿಕೊಂಡಿವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಚಿರತೆ ಹಿಡಿಯಲು ಮೊಕಲಿಮೆಟ್ಟು, ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನ, ೩೫ನೇ ತಿರುವಿನಲ್ಲಿ ಇಟ್ಟಿದ ಬೋನಿನಲ್ಲಿ ಚಿರತೆ ಇಂದು ಬೆಳಗ್ಗೆ ಮತ್ತೊಂದು ಸೆರೆ ಸಿಕ್ಕಿದೆ. ತಿರುಮಲದ ಏಳನೇ ಮೈಲಿ, ನಾಮಲಗಾವಿ ಮತ್ತು ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದ ಸುತ್ತಮುತ್ತಲಿನ ಟ್ರ್ಯಾಪ್ ಕ್ಯಾಮೆರಾಗಳಲ್ಲಿ ಚಿರತೆಗಳು ದಾಖಲಾಗಿವೆ. ತದನಂತರ ಭಕ್ತರು ಇನ್ನೊಂದು ಚಿರತೆಯನ್ನು ಕಂಡು ತೀವ್ರ ಭಯಭೀತರಾಗಿದ್ದರು. ತಿರುಮಲದಲ್ಲಿ ಅನೇಕ ಚಿರತೆಗಳು ಸಂಚರಿಸುತ್ತವೆ ಎಂದು ಸಂಬಂಧಿಸಿದ ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *

error: Content is protected !!