
ಉದಯವಾಹಿನಿ, ಬೀದರ್ : ಕಮಲನಗರ ತಾಲೂಕಿನ ಮದನೂರ ಗ್ರಾಮದಲ್ಲಿ ಮಂಗಳವಾರ ಸ್ವಾತಂತ್ರೋತ್ಸವ ಅಂಗವಾಗಿ ಸೈನಿಕರಿಗೆ, ನೌಕಾಪಡೆ, ವಾಯುಪಡೆ, ಪೊಲೀಸ್ ಇಲಾಖೆ, ಅಗ್ನಿಶಾಮಕ ದಳದಲ್ಲಿ ಸೇವೆ ಸಲ್ಲಿಸಿದವರಿಗೆ ಗ್ರಾಮ ಪಂಚಾಯಿತಿ ವತಿಯಿಂದ ಸ್ಮರಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪೂಜಾ ಗುಂಡಪ್ಪ ಬೆಲ್ಲೆ, ಉಪಾಧ್ಯಕ್ಷೆ ಚಂದ್ರಕಲಾ ರಮೇಶ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಮದಾಸ ಬೇಲೂರೆ, ಗ್ರಾಪಂ ಸದಸ್ಯರು, ಸಿಬ್ಬಂದಿ, ಗ್ರಾಮಸ್ಥರು ಇದ್ದರು.ಸ್ವಾತಂತ್ರೋತ್ಸವ ಅಂಗವಾಗಿ ತಾಲೂಕಿನ ಮದನೂರ ಗ್ರಾಮ ಪಂಚಾಯಿತಿ ವತಿಯಿಂದ ದೇಶ ಸೇವೆ ಸಲ್ಲಿಸಿದ 33 ಜನರನ್ನು ಮಂಗಳವಾರ ಸನ್ಮಾನ ಮಾಡಿ ಗೌರವಿಸಲಾಯಿತು.
ಪಂಚಾಯಿತಿ ವ್ಯಾಪ್ತಿಯ ಖತಗಾಂವ ಹಾಗೂ ಮದನೂರ ಗ್ರಾಮದ ನಿವೃತ್ತರಾದ ಹಾಗೂ ಸೇವಾನಿರತ ಯೋಧರಿಗೆ, ಪೊಲೀಸರಿಗೆ, ಅಗ್ನಿಶಾಮಕ ದಳದವರಿಗೆ, ನೌಕಾಪಡೆ ಹಾಗೂ ವಾಯುಪಡೆಯಲ್ಲಿ ಸೇವೆ ಸಲ್ಲಿಸಿದವರಿಗೆ ಸ್ಮರಣಿಕೆ ನೀಡಿ ಶಾಲು ಹೊದಿಸಿ ಸನ್ಮಾನಿಸಲಾಯಿತು. ಗ್ರಾಪಂ ಅಧ್ಯಕ್ಷೆ ಪೂಜಾ ಗುಂಡಪ್ಪ ಬೆಲ್ಲೆ ಅವರು ಪಂಚಾಯತ್ ಕಟ್ಟಡದ ಮೇಲೆ ಧ್ವಜಾರೋಹಣ ನೆರವೇರಿಸಿ, ಇಂದು ದೇಶದಲ್ಲಿ ಭ್ರಷ್ಟಾಚಾರವು ಎಲ್ಲ ವಲಯಗಳಲ್ಲಿಯೂ ಮಿತಿ ಮೀರಿದೆ. ಸಾಮಾನ್ಯರು ಬದುಕುವುದು ದುಸ್ತರವಾಗಿದೆ. ಭ್ರಷ್ಟಾಚಾರ ನಿಯಂತ್ರಿಸುವುದರ ಜತೆಗೆ ಚುನಾವಣೆಗಳಲ್ಲಿ ಹಣ ಹಂಚುವ ಅಭ್ಯರ್ಥಿಗೆ ಮತ ನೀಡಬೇಡಿ. ಸ್ವದೇಶಿ ವಸ್ತುಗಳನ್ನು ಹೆಚ್ಚಾಗಿ ಬಳಸಿದರೆ ಭಾರತ ವಿಶ್ವಗುರು ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು. ಸನ್ಮಾನ್ಯ ಸ್ವೀಕರಿಸಿದ ಮಾಜಿ ಸೈನಿಕರಾದ ಕಾಂತವೀರ ಬಾಳೂರೆ ಮಾತನಾಡಿ, ಎಲ್ಲರೂ ಸೇರಿ ಗ್ರಾಮ ಅಭಿವೃದ್ಧಿ ಕಡೆಗೆ ಹೆಚ್ಚುವರಿ ಗಮನಹರಿಸಬೇಕು ಮತ್ತು ಪಾಲಕರು ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಬೇಕು ಹಾಗೂ ಸಾವಯವ ಕೃಷಿ ಹೆಚ್ಚಿನ ಆದ್ಯತೆ ಮತ್ತು ಮಕ್ಕಳಲ್ಲಿ ದೇಶಾಭಿಮಾನ ಮೂಡಿಸುವ ಕೆಲಸ ನಿರಂತರವಾಗಿ ಜನರಲಿ ಎಂದು ನುಡಿದರು. ಗ್ರಾಪ ಉಪಾಧ್ಯಕ್ಷೆ ಚಂದ್ರಕಲಾ ರಮೇಶ, ಪಿಡಿಒ ರಾಮದಾಸ ಬೇಲೂರೆ, ಗ್ರಾಪಂ ಸದಸ್ಯರು, ಸಿಬ್ಬಂದಿ ಹಾಗೂ ಗ್ರಾಮಸ್ಥರು ಇದ್ದರು ಗೋರಕಾಥ ಸವಳೆ ನಿರೂಪಿಸಿದರು.
