ಉದಯವಾಹಿನಿ ಬೆಳಗಾವಿ: ಜಿಲ್ಲೆಯ ಸವದತ್ತಿ ತಾಲೂಕಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯಾಗಿರುವ ಡಾಕ್ಟರ್ ಮಹೇಶ್ ಚಿತ್ತರಗಿಯವರು ಪದೋನ್ನತಿ ಹೊಂದಿ ಧಾರವಾಡ ಜಿಲ್ಲೆಯ ಕುಟುಂಬ ಕಲ್ಯಾಣ ಅಧಿಕಾರಿಯಾಗಿ ವರ್ಗಾವಣೆ ಹೊಂದಿರುವ ಪ್ರಯುಕ್ತ ತೆರವಾದ ಸ್ಥಾನಕ್ಕೆ ಡಾಕ್ಟರ್ ಶ್ರೀಪಾದ ಸಬನೀಸ ಆಡಳಿತ ವೈದ್ಯಾಧಿಕಾರಿಗಳು ಪ್ರಾಥಮಿಕ ಆರೋಗ್ಯ ಕೇಂದ್ರ ಹಿರೇಕುಂಬಿ ಇವರು ಸವದತ್ತಿ ತಾಲೂಕಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
