
ಉದಯವಾಹಿನಿ,ಸಿರುಗುಪ್ಪ : 2018-19 ನೇ ಸಾಲಿನ ಆರ್ ಐ ಟಿ ಇ ಎಸ್ ಯೋಜನೆ ಅಡಿಯಲ್ಲಿ ಮುಂಜೂರಾದ ಸುಮಾರು 78.12 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಯನ್ನು ತಾಲ್ಲೂಕಿನ ತೆಕ್ಕಲಕೋಟೆ ಪಟ್ಟಣದ ಹೊರ ವಲಯದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹೆಚ್ಚುವರಿ ಕೊಠಡಿಗಳ ನಿರ್ಮಾಣ ಕಾರ್ಯಗಾರಿಗೆ ಶಾಸಕ ಬಿ ಎಂ ನಾಗರಾಜ ಅವರು ಭೂಮಿ ಪೂಜೆ ನೆರವೇರಿಸಿದರು.ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಎಚ್.ಎಮ್.ಮಲ್ಲಿಕಾರ್ಜುನ, ಎಸ್.ನರೇಂದ್ರ ಸಿಂಹ, ದೇವರಮನೆ ನಾಗಪ್ಪ, ಎಂ.ಎಸ್ .ಬಂದೇನವಾಜ್, ಎಸ್.ಶ್ಯಾಮ್ ಸುಂದರ್, ಗೋವಿಂದರೆಡ್ಡಿ, ಮಂಜುನಾಥ್ ರೆಡ್ಡಿ, ಸೂರಿ, ಪವನ್ ದೇಸಾಯಿ, ಹಚ್ಚೋಳ್ಳಿ ಮಾಬುಸಾಬ್, ಜಡೆ ಮಲ್ಲಿಕಾರ್ಜುನ, ಸಿರುಗುಪ್ಪ ನಗರಸಭೆ ಸದಸ್ಯರುಗಳಾದ ಅಪ್ಪಾಜಿ ,ಗಣೇಶ್, ತೆಕ್ಕಲಕೋಟೆ ಪಟ್ಟಣ ಪಂಚಾಯತ್ ಸದಸ್ಯರುಗಳಾದ ಎಂ. ನಸುರುದ್ದೀನ್, ಎಂ ಖಾದರ್ ವಲಿ, ಎನ್.ಮಾಬು ಸಾಬ್ , ಕಾಲೇಜಿನ ಪ್ರಾಂಶುಪಾಲರಾದ ಡಾ.ಮಲ್ಲಿಕಾರ್ಜುನ ಹಾಗೂ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
