
ಉದಯವಾಹಿನಿ,ಮುದ್ದೇಬಿಹಾಳ ; ಮುದ್ದೇಬಿಹಾಳ ಮತ್ತು ತಾಳಿಕೋಟೆ ತಾಲೂಕಿನ ಅನೇಕ ಗ್ರಾಮಗಳ ಕಿರಾಣಿ, ಚಹಾದ ಅಂಗಡಿಗಳಲ್ಲಿ ಅಕ್ರಮ ಮಧ್ಯ ಮಾರಾಟ ಮಾಡಲಾಗುತ್ತಿದೆ ಮತ್ತು ತಾಳಿಕೋಟೆ ತಾಲೂಕಿನ ಮಿಣಜಗಿ ಗ್ರಾಮ ಸರಾಯಿ ಮುಕ್ತ ಗ್ರಾಮವೆಂದು ಸರಕಾರ ಘೋಷಣೆ ಮಾಡಿದರು ಅಲ್ಲಿ ಅಕ್ರಮ ಮಧ್ಯ ಮಾರಾಟ ಮಾಡಲಾಗುತ್ತಿದೆ ಇದನ್ನು ತಡೆಗಟ್ಟುವಲ್ಲಿ ಅಬಕಾರಿ ಇಲಾಖೆ ವಿಫಲವಾಗಿದೆ ಎಂದು ಆಗ್ರಹಿಸಿ ದಲಿತಪರ ಸಂಘಟನೆ ಮುಖಂಡರು ಮುದ್ದೇಬಿಹಾಳ ಅಬಕಾರಿ ಕಚೇರಿಯ ಮುಂದೆ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ. ಈ ವೇಳೆ ಮಾತನಾಡಿದ ದಲಿತ ಮುಖಂಡ ಹರೀಶ್ ನಾಟಿಕಾರ ಹಿಂದಿನ ಸರಕಾರದ ಅವಧಿಯಲ್ಲಿ ಅಕ್ರಮ ಮಧ್ಯ ಮಾರಾಟದ ಕುರಿತು ಬೋಬ್ಬೆ ಹೋಡೆಯುತ್ತಿದ್ದ ನಾಯಕರು ಈಗ ಮಾಯಾವಾಗಿದ್ದಾರೆ ತಾಲೂಕಿನ ಪ್ರತಿ ಹಳ್ಳಿಗಳಲ್ಲಿ ಅಕ್ರಮ ಮಧ್ಯ ಮಾರಾಟ ಮಾಡಲಾಗುತ್ತಿದೆ ಎಂದ ಹರೀಶ್ ನಾಟಿಕಾರ ಚುನಾವಣೆ ಸಂದರ್ಭದಲ್ಲಿ ಅಬಕಾರಿ ಇಲಾಖೆಯ ಅಧಿಕಾರಿಗಳು ವಶಪಡಿಸಿಕೊಂಡ ಮಧ್ಯ ಎಷ್ಟು? ಅದನ್ನು ಸರಕಾರಕ್ಕೆ ಒಪ್ಪಸಿಲಾಗಿದೆಯಾ? ನಾಶ ಮಾಡಿದ್ದಾರ? ಇದನ್ನು ಬಹಿರಂಗ ಪಡಿಸಬೇಕು ನನ್ನ ಬಳಿ ಇದರ ಬಗ್ಗೆ ದಾಖಲೆಗಳು ಇದ್ದು ಅದನ್ನು ಬಹಿರಂಗ ಪಡಿಸುತ್ತೇನೆ ನಾವು ಸಂವಿಧಾನ ಪ್ರಜ್ಞೆಯಿಂದ ಹೋರಾಟ ಮಾಡುತ್ತಿದ್ದೇವೆ
ಅಕ್ರಮ ಮಧ್ಯ ಮಾರಾಟ ತಡೆಯದೆ ಇದ್ದಲ್ಲಿ ಅಂಬೇಡ್ಕರ್ ವೃತ್ತದಿಂದ ಅಬಕಾರಿ ಕಛೇರಿಯ ವರಗೆ ಉರಳು ಸೇವೆ ಮಾಡುತ್ತೇವೆ ಐದು ಹಂತಗಳಲ್ಲಿ ಹೋರಾಟ ಮಾಡುತ್ತೇವೆ ಎಂದರು. ದಲಿತ ಯುವ ಮುಖಂಡ ಬಸವರಾಜ ಸಿದ್ದಾಪುರ ಮಾತನಾಡಿ ಮುದ್ದೇಬಿಹಾಳ ತಾಲೂಕಿನಲ್ಲಿ ಅಕ್ರಮ ಮಧ್ಯ ಮಾರಾಟ ಎಗ್ಗಿಲ್ಲದೆ ಸಾಗಿದೆ ಎನ್ನುವುದಕ್ಕೆ ಮಿಣಜಗಿ ಗ್ರಾಮ ಸರಾಯಿ ಮುಕ್ತ ಗ್ರಾಮವೆಂದು ಘೋಷಣೆಯಾದರು ಅಲ್ಲಿ ಮಧ್ಯ ಮಾರಾಟ ಮಾಡುತ್ತಿರುವುದು ,ಮುದ್ದೇಬಿಹಾಳ ತಾಳಿಕೋಟೆ ತಾಲೂಕಿನಲ್ಲಿ ಅಕ್ರಮ ಮಧ್ಯ ಮಾರಾಟ ಅಬಕಾರಿ ಅಧಿಕಾರಿಗಳ ಕುಮ್ಮಕ್ಕನಿಂದ ನಡೆದಿದೆ ,ಗ್ರಾಮಗಳಲ್ಲಿ ಮಧ್ಯ ಮಾರಾಟ ಮಾಡುವವರು ಸರಕಾರ ನಮಗೆ ಪರವಾಗಿ ನೀಡಿದೆ ಎಂದು ಹೇಳುತ್ತಾರೆ,ಇವತ್ತು ಹಳ್ಳಿಗಳಲ್ಲಿ ಅಕ್ರಮ ಮಧ್ಯ ಮಾರಾಟಕ್ಕೆ ಅಬಕಾರಿ ಅಧಿಕಾರಿಗಳು ನಿಗಾ ವಹಿಸದೆ ಇರುವುದೆ ಕಾರಣವಾಗಿದೆ ಇದು ಅಧಿಕಾರಿಗಳ ಹೇಡಿತನ ತೋರಿಸುತ್ತದೆ
ಅಕ್ರಮ ಮಧ್ಯ ಕ್ಕೆ ತಡೆಯಾಗದೆ ಇದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಅಬಕಾರಿ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಪರಶುರಾಮ ನಾಲತವಾಡ, ಸಿದ್ದಪ್ಪ ದೂಡಮನಿ, ಲಕ್ಷ್ಮಣ ಬಿದರಕುಂದಿ, ಜಗದೀಶ್ ಸರೂರ, ದುರಗೇಶ ಮಿಣಜಗಿ ಮುಂತಾದವರು ಉಪಸ್ಥಿತರಿದ್ದರು
