ಉದಯವಾಹಿನಿ,ಸಿಂಧನೂರು: ಸಿಂಧನೂರು ತಾಲ್ಲೂಕು ಅತೀ ಹೆಚ್ಚಾಗಿ ಭತ್ತವನ್ನು ಬೆಳೆಯುವುದರಿಂದ ಭತ್ತದ ನಾಡು ಮತ್ತು ಸಾವಿರಾರು ಎಕರೆ ಜಮೀನು ಹೊಂದಿರುವ ಸಿಎಸ್ಎಫ್ ದೊಡ್ಡ ಮಟ್ಟದಲ್ಲಿ ಫಾರ್ಮರ್ಸ್ ಇರುವ ಸಿಂಧನೂರು ನಗರ ವಾಣಿಜ್ಯ ಪ್ರದೇಶವಾಗಿ ಮಾರ್ಪಟ್ಟಿದ್ದು ಮುಂದೆ ದಿನಗಳಲ್ಲಿ ಶಾಸಕ ಹಂಪನಗೌಡ ಬಾದರ್ಲಿ ಅವರು ನೇತೃತ್ವದಲ್ಲಿ ನಡೆದ ಸಿಂಧನೂರುನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಬೇಕೆಂಬ ಉದ್ದೇಶವನ್ನು ಇಟ್ಟುಕೊಂಡು ನಗರದ ಟೌನ್ ಹಾಲ್ ನಲ್ಲಿ ಸಂಘ ಸಂಸ್ಥೆಗಳ ಸಾಹಿತಿಗಳು ವಕೀಲರ ಸಂಘ. ಖಾಸಗಿ ವೈದ್ಯಕೀಯ ಸಂಸ್ಥೆಗಳ ರೈತ ಸಂಘ ಕನ್ನಡ ಸಂಘಟನೆಗಳ ಸೇರಿದಂತೆ ಒಂದು ದೊಡ್ಡ ಮಟ್ಟದಲ್ಲಿ ಸಭೆ ಮಾಡಿದರು. ವರತು ಮುಂದೆ ಯಾರು ಸಹ ಇದರ ಬಗ್ಗೆ ಧ್ವನಿ ಎತ್ತಲಿಲ್ಲ ಎಂದು ಸಾರ್ವಜನಿಕರು ಮಾತನಾಡುತ್ತಾರೆ.ಆದರೆ ಸಿಂಧನೂರು ಟು ಬೆಂಗಳೂರಿಗೆ ಹೊರಡುವ ರಾಜ್ಯ ಹೆದ್ದಾರಿಯ ಬಳಿ ದಿನಕ್ಕೆ ಸಾವಿರಾರು ಸಂಖ್ಯೆಯಲ್ಲಿ ನಗರಕ್ಕೆ ಬರುವ ಬಸ್ ಕಾರು ಲಾರಿ ಟಿಪ್ಪರ್ ಬೈಕ್ ಇತರರು ಯಾವಾಗಲೂ ವಾಹನಗಳ ಸಂಚಾರ ಮಾಡುತ್ತಿರುತ್ತಾರೆ. ರಸ್ತೆ ಬಳಿ ಹಳ್ಳದ ಪಕ್ಕದಲ್ಲಿ ಭಯಂಕರವಾದ ಕಸ ವಿಲೇವಾರಿ ಜೊತೆಗೆ ಸತ್ತ ಪ್ರಾಣಿಗಳನ್ನು ತಂದು ಹಾಕುತ್ತಿರುವುದರಿಂದ ಸಂಚಾರ ಮಾಡು ಸವಾರರಿಗೆ ಬಹಳಷ್ಟು ತೊಂದರೆ ಮತ್ತು ರಸ್ತೆ ಬಳಿ ದುರ್ವಾಸನೆ ಹಾಗೂ ಕಸ ಸುಟ್ಟು ಬೂದಿ ಗಾಳಿಗೆ ಬಂದು ಸಂಚಾರ ಮಾಡು ಸವಾರರ ಕಣ್ಣುಗಳಿಗೆ ಕಸ ಬೀಳುವುದರಿಂದ ವಾಹನ ಸಂಚಾರ ಮಾಡುವ ವ್ಯಕ್ತಿಗಳು ಆಯ ತಪ್ಪಿ ಎಕ್ಸೆಂಟ್ ಯಾಗಿ ಎಷ್ಟು ಪ್ರಾಣ ಕಳೆದುಕೊಂಡ ಸಾಕಷ್ಟು ಉದಾಹರಣೆಗಳಿವೆ ಈ ಮಾರ್ಗದಲ್ಲಿ ಎಂದು ಸಾರ್ವಜನಿಕರು ವಾದವಾಗಿದೆ ಆದರಿಂದ ರಾಜ್ಯ ಹೆದ್ದಾರಿ ಅಭಿವೃದ್ಧಿ ಅಧಿಕಾರಿ ಪಿಡಬ್ಲ್ಯೂಡಿ ಎಇಇ ಮತ್ತು ನಗರಸಭೆ ಪೌರಾಯುಕ್ತರು ಹೊಸಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸೇರಿದಂತೆ ಎಷ್ಟು ದಿನಗಳಲ್ಲಿ ಹೆದ್ದಾರಿ ಸಮಸ್ಯೆಗಳನ್ನು ನಿಭಾಯಿಸಲು ಅಧಿಕಾರಿಗಳು ಮುಂದಾಗುತ್ತಾರು ಇಲ್ಲವೂ ಕಾದು ನೋಡಬೇಕಾಗಿದೆ ಇ ತರದ ಸಮಸ್ಯೆಗಳು ಇದ್ದು ತಾಲ್ಲೂಕು ಸ್ವಚ್ಛವಾಗಿ ಇಲ್ಲದಿದ್ದರೆ ಹೇಗೆ ಸಿಂಧನೂರು ತಾಲ್ಲೂಕು ಜಿಲ್ಲೆಯನ್ನಾಗಿ ಮಾಡಲಿಕ್ಕೆ ಸಾಧ್ಯವಾಗುತ್ತದೆ…..??? ಶಾಸಕರಾದ ಹಂಪನಗೌಡ ಬಾದರ್ಲಿ ಅವರು ಇದರ ಬಗ್ಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡುತ್ತಾರೋ ಇಲ್ಲವೋ ನೋಡಬೇಕಾಗಿದೆ…!

Leave a Reply

Your email address will not be published. Required fields are marked *

error: Content is protected !!