ಉದಯವಾಹಿನಿ, ಹಿಮಾಲಯ: ದಕ್ಷಿಣ ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ಸದ್ಯ ಆಧ್ಯಾತ್ಮಿಕ ಸ್ಥಳಗಳಿಗೆ ಭೇಟಿ ನೀಡುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಅವರ ಇತ್ತೀಚಿನ ಚಿತ್ರ ‘ಜೈಲರ್’ ಬಿಡುಗಡೆಗೂ ಮುನ್ನ ಅವರು ಹಿಮಾಲಯಕ್ಕೆ ತೆರಳಿದ್ದರು. ಕರೋನಾ ಸಾಂಕ್ರಾಮಿಕ ರೋಗದಿಂದಾಗಿ ಅವರು ಕಳೆದ ಮೂರು ವರ್ಷಗಳಿಂದ ಹಿಮಾಲಯಕ್ಕೆ ಹೋಗಿರಲಿಲ್ಲ. ಆಧ್ಯಾತ್ಮಿಕ ಧ್ಯಾನಕ್ಕಾಗಿ ಪ್ರತಿ ವರ್ಷ ಹಿಮಾಲಯಕ್ಕೆ ಹೋಗುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ಈ ಬಾರಿ ಹಿಮಾಲಯದ ಆಶ್ರಮಗಳಲ್ಲಿ ಕಾಲ ಕಳೆದ ನಂತರ ಹಲವು ಪುಣ್ಯಕ್ಷೇತ್ರಗಳಿಗೆ, ಆಶ್ರಮಗಳಿಗೆ ಭೇಟಿ ನೀಡುತ್ತಿದ್ದಾರೆ. ಹಾಗೆಯೇ ಬದರಿನಾಥ್‌ಗೂ ಭೇಟಿ ನೀಡಿದ್ದರು.
ಇತ್ತೀಚೆಗಷ್ಟೇ ರಜನಿ ಜಾರ್ಖಂಡ್ ರಾಜ್ಯದ ರಾಂಚಿಯಲ್ಲಿರುವ ಯೋಗಾನಂದ ಆಶ್ರಮವನ್ನು ತಲುಪಿದ್ದರು. ಅಲ್ಲಿ ಅವರು ಸುಮಾರು ಒಂದು ಗಂಟೆ ಧ್ಯಾನ ಮಾಡಿದರು. ನಂತರ, ಅವರು ಆಶ್ರಮದಲ್ಲಿ ಶ್ರೀಗಳನ್ನು ಭೇಟಿಯಾದರು. ಈ ಸಂದರ್ಭದಲ್ಲಿ ರಜನಿ ಅವರು ಆಧ್ಯಾತ್ಮಿಕ ಯಾತ್ರೆಯ ಅಂಗವಾಗಿ ಆಶ್ರಮಕ್ಕೆ ಬಂದಿರುವುದಾಗಿ ತಿಳಿಸಿದರು. ಅದೇ ನಗರದ ಚಿಕ್ಕ ದೇವಸ್ಥಾನಕ್ಕೂ ಭೇಟಿ ನೀಡಿದ್ದರು. ಅದೇ ಪ್ರವಾಸದಲ್ಲಿ, ಅವರು ಉತ್ತರಾಖಂಡದ ದ್ವಾರಹತ್‌ನಲ್ಲಿರುವ ಪಾಂಡವ ಕೊಹ್ಲಿ ಗುಹೆಯಲ್ಲಿ ಧ್ಯಾನ ಮಾಡಿದರು.. ಇನ್ನು ’ಜೈಲರ್’ ಸಿನಿಮಾದ ವಿಚಾರಕ್ಕೆ ಬಂದರೆ… ರೂ. ೫೦೦ ಕೋಟಿ ಕಲೆಕ್ಷನ್‌ನತ್ತ ಈ ಚಿತ್ರ ಮುನ್ನುಗ್ಗುತ್ತಿದೆ.
