ಉದಯವಾಹಿನಿ, ಮುಂಬೈ: ಅನಿಲ್ ಶರ್ಮಾ ನಿರ್ದೇಶನದ ಗದರ್ ೨ ಬಾಲಿವುಡ್‌ನ ಅತ್ಯಂತ ಜನಪ್ರಿಯ ಚಲನಚಿತ್ರಗಳಲ್ಲಿ ಒಂದಾಗಿ ಹೊರಹೊಮ್ಮಿದೆ.ಸನ್ನಿ ಡಿಯೋಲ್ ಮತ್ತು ಅಮೀಶಾ ಪಟೇಲ್ ನಟಿಸಿರುವ ಈ ಚಿತ್ರವು ಎಲ್ಲಾ ಮೂಲೆಗಳಿಂದ ಅಪಾರ ಜನ ಪ್ರೀತಿ-ಮೆಚ್ಚುಗೆ ಪಡೆಯುತ್ತಿದೆ .ಸ್ಟಾರ್ ನಟರ ರೆಕಾರ್ಡ್ ಗಳನ್ನು ಸನ್ನಿ ಧೂಳಿಪಟ ಮಾಡಿದ್ದಾರೆ.
ಚಿತ್ರಕ್ಕೆ ಪ್ರೇಕ್ಷಕರು ಮಾತ್ರವಲ್ಲದೆ ಸೆಲೆಬ್ರಿಟಿಗಳಿಂದಲೂ ಭಾರೀ ಪ್ರಮಾದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕಾರ್ತಿಕ್ ಆರ್ಯನ್, ಕಂಗನಾ ರನೌತ್ ಮತ್ತು ವರುಣ್ ಧವನ್ ಎಲ್ಲರೂ ಆಕ್ಷನ್ ಡ್ರಾಮಾ ಚಿತ್ರವನ್ನು ಶ್ಲಾಘಿಸಿದ್ದಾರೆ. ಮುಂಬೈನ ಜನಪ್ರಿಯ ಥಿಯೇಟರ್ ಗೈಟಿ ಗ್ಯಾಲಕ್ಸಿಯಲ್ಲಿ ಚಲನಚಿತ್ರ ವೀಕ್ಷಿಸಿ ಆನಂದಿಸಿದ ಹಿರಿಯ ನಟ ಅನುಪಮ್ ಖೇರ್ ಈ ಪಟ್ಟಿಗೆ ಸೇರಿದ್ದಾರೆ.
ಸನ್ನಿ ಡಿಯೋಲ್ ಅವರ ಬ್ಲಾಕ್ ಪ್ಲಾಸ್ಟರ್ ಚಿತ್ರ ಕುರಿತು, ಖೇರ್ ತಮ್ಮ ಅಭಿಮಾನಿಗಳೊಂದಿಗೆ ಚಿತ್ರದ ಅನುಭವದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಚಿತ್ರದ ಕುರಿತು ವಿವರವಾದ ವಿಮರ್ಶೆಯನ್ನು ಹಂಚಿಕೊಂಡರು. ಚಿತ್ರವನ್ನು ಶ್ಲಾಘಿಸಿದ ಅನುಪಮ್ ಇದನ್ನು ಭಾವನೆಗಳ ಸುನಾಮಿ ಎಂದು ಕರೆದು ಸನ್ನಿ ಡಿಯೋಲ್ ಅಭಿನಯವನ್ನು ತುಂಬಾ ಹೃದಯದಿಂದ ಮನಸಾರೆ ಶ್ಲಾಘಿಸಿದ್ದಾರೆ.ಚಿತ್ರಕ್ಕೆ ತಮ್ಮ ಪ್ರೀತಿಯ ಸುರಿಮಳೆಯೇ ಸುರಿಸಿದ್ದಾರೆ.
