
ಉದಯವಾಹಿನಿ, ಅಕ್ರೋಟ್‌ನ ಮೂಲಸ್ಥಾನ ಮಲಯೊ. ದಕ್ಷಿಣ ಭಾರತದ ಕಾಡುಗಳಲ್ಲಿಯೂ ಹೆಚ್ಚಾಗಿ ಇದನ್ನು ಬೆಳೆಯುತ್ತಾರೆ. ಅಕ್ರೋಟ್‌ನ ಕವಚದಿಂದ ಒಳಗಿರುವ ಬೀಜವನ್ನು ತೆಗೆದುನೋಡಿದರೆ ಅದರ ಆಕಾರ ಮನುಷ್ಯನ ತಲೆಬುರುಡೆಯ ಒಳಗಿರುವ ಮೆದುಳನ್ನು ಹೋಲುತ್ತದೆ. ಭಗವಂತನ ಸೃಷ್ಟಿಯು ಅದ್ಭುತ. ಈ ಬೀಜ ಕೂಡ ಮೆದುಳಿಗೆ ಸಂಬಂಧಪಟ್ಟಂತಹ ಸಮಸ್ಯೆಗಳಿಗೆ ಅತಿ ಉತ್ತಮವಾದ್ದದು. ಇದರ ಎಲೆ, ತೊಗಟೆ, ತಿರುಳು, ಕಾಂಡ, ಬೀಜ, ಬೀಜದಿಂದ ತೆಗೆದ ಎಣ್ಣೆ ಬಹಳ ಉಪಯುಕ್ತವಾದುದು. ಇದು ಜೀವಸತ್ವಗಳು ಹಾಗೂ ಅಧಿಕವಾದ ಖನಿಜ ಪದಾರ್ಥಗಳನ್ನು ಒಳಗೊಂಡಿದೆ. ಪ್ರೋಟೀನ್, ನಾರಿನಂಶ, ತಾಮ್ರ, ಪೋಲಿಕ್ ಆಸಿಡ್, ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಷಿಯಂ, ಪೊಟ್ಯಾಷಿಯಂ, ಸತು, ಪಾಸ್ಫರಸ್, ಮ್ಯಾಂಗನೀಸ್, ಬಿ ೬ ಮತ್ತು ಇ ಜೀವಸತ್ವಗಳು ಇದರಲ್ಲಿ ವಿಶೇಷವಾಗಿವೆ.
೧. ಹೊಟ್ಟೆನೋವಿಗೆ: ಅಕ್ರೋಟ್ ಎಲೆಯನ್ನು (೨) ತಿನ್ನುವುದರಿಂದ ಹೊಟ್ಟೆನೋವು ನಿವಾರಣೆಯಾಗುತ್ತದೆ. ಎಲೆ ಸಿಕ್ಕದಿದ್ದಾಗ ಅಕ್ರೋಟ್ ಅನ್ನು ಸೇವಿಸಬಹುದು.
೨. ಮಲಬದ್ಧತೆಗೆ: ಅಕ್ರೋಟ್ ಬೀಜದ ಎಣ್ಣೆಯನ್ನು ಸೇವಿಸಿದರೆ ಭೇದಿಯ ರೂಪದಲ್ಲಿ ಮಲವಿಸರ್ಜನೆಯಾಗುತ್ತದೆ.
೩. ಜಂತುಹುಳುವಿಗೆ: ಅಕ್ರೋಟ್ ಬೀಜದ ಎಣ್ಣೆಯ ಸೇವನೆಯಿಂದ ಜಂತುಹುಳುಗಳ ಉಪಟಳವನ್ನು ನಿವಾರಿಸಿಕೊಳ್ಳಬಹುದು.
೪. ಎದೆಹಾಲನ್ನು ನಿಲ್ಲಿಸಲು: ಹಾಲುಣಿಸುವ ತಾಯಂದಿರಿಗೆ ಹಾಲು ನಿಲ್ಲಿಸಲು ಇದರ ತೊಗಟೆಯ ಕಷಾಯ ಸೇವನೆಯಿಂದ ಹಾಲಿನ ಉತ್ಪತ್ತಿ ನಿಂತುಹೋಗುತ್ತದೆ.
೫. ಮೂಲವ್ಯಾಧಿ: ಈ ಸಮಸ್ಯೆಯಿಂದ ಬಳಲುತ್ತಿರುವವರು, ಇದರ ಹಣ್ಣಿನ ರಸ ಇಲ್ಲವೆ ಬೀಜದ ಭಾಗವನ್ನು ಸೇವಿಸಿ.
೬. ಶಕ್ತಿವರ್ಧಕ: ಶರೀರಕ್ಕೆ ಬೇಕಾಗುವ ಪೌಷ್ಠಿಕಾಂಶಗಳನ್ನು ಒದಗಿಸಿ ಶರೀರಕ್ಕೆ ಬಲವನ್ನು ಕೊಡುತ್ತದೆ, ಬೆಳವಣಿಗೆಗೆ ಸಹಾಯಕವಾಗುತ್ತದೆ.
೭. ಕೊಲೆಸ್ಟ್ರಾಲ್ ಮಟ್ಟವನ್ನು ಕಾಯ್ದುಕೊಳ್ಳುತ್ತದೆ: ಶರೀರಕ್ಕೆ ಬೇಡದ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಶರೀರಕ್ಕೆ ಬೇಕಾಗುವ ಒಳ್ಳೆಯ ಕೊಲೆಸ್ಟ್ರಾಲ್ ಅನ್ನು ಉಳಿಸಿಕೊಳ್ಳುತ್ತದೆ. ಹಾಗಾಗಿ ಹೃದಯಕ್ಕೆ ಸಂಬಂಧಪಟ್ಟಂತಹ ಸಮಸ್ಯೆಗಳಿಗೆ ಇದರ ಸೇವನೆಯಿಂದ ಅನುಕೂಲವಾಗುತ್ತದೆ. ೮. ಕ್ಯಾನ್ಸರ್‌ಗೆ : ಒಮೆಗಾ ೩ ಫ್ಯಾಟಿ ಆಸಿಡ್ ಮತ್ತು ಇ ಜೀವಸತ್ವ ಇರುವುದರಿಂದ ಕ್ಯಾನ್ಸರ್ ಸಮಸ್ಯೆ ಬರದಿರುವಂತೆ ಕಾಪಾಡುತ್ತದೆ.
೯. ಜ್ಞಾಪಕಶಕ್ತಿ: ಒಮೇಗಾ ೩ ಆಸಿಡ್ ಇರುವುದರಿಂದ ಜ್ಞಾಪಕಶಕ್ತಿ ಹಾಗೂ ಬುದ್ಧಿಶಕ್ತಿ ಜಾಸ್ತಿಯಾಗುತ್ತದೆ. ಮೆದುಳಿನ ಕ್ರಿಯಾಶೀಲತೆ ಹೆಚ್ಚುತ್ತದೆ. ಮೆದುಳಿಗೆ ಉತ್ತಮ ತ್ರಾಣಿಕ.
೧೦. ಮಾನಸಿಕ ಒತ್ತಡ ಹಾಗೂ ಖಿನ್ನತೆ: ಮೆದುಳು ಚೆನ್ನಾಗಿ ಕೆಲಸ ಮಾಡುವುದರಿಂದ ಹಾಗೂ ರಕ್ತನಾಳಗಳಿಗೆ ಆಮ್ಲಜನಕ ಒದಗಿಸಿ ರಕ್ತದ ಸರಬರಾಜು ಆಗುವುದರಿಂದ ಮನಸ್ಸು ಸಮಾಧಾನವಾಗಿರಲು ಸಹಕಾರಿ ಹಾಗೂ ಖಿನ್ನತೆಗೆ ಒಳಗಾಗಿರುವವರಿಗೆ ಪ್ರತಿನಿತ್ಯ ಅಕ್ರೋಟ್ ಸೇವಿಸಲು ಕೊಡುವುದರಿಂದ ಬಹಳ ಬೇಗ ಚೇತರಿಸಿಕೊಳ್ಳುತ್ತಾರೆ.
